ಉಡುಪಿ:  ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದದಿಂದ ಮೀನುಗಾರರಿಗೆ ಅನುಕೂಲ: ಶಾಸಕ ಯಶಪಾಲ್ ಸುವರ್ಣ – vishwanews24

Featured, ಉಡುಪಿ

ಉಡುಪಿ:  ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದದಿಂದ ಮೀನುಗಾರರಿಗೆ ಅನುಕೂಲ: ಶಾಸಕ ಯಶಪಾಲ್ ಸುವರ್ಣ

ಉಡುಪಿ: ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಅಂಕಿತ ಹಾಕುವ ಮೂಲಕ ದೇಶದ ಮೀನುಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ರಫ್ತನ ಮೇಲೆ ಬ್ರಿಟನ್ ವಿಧಿಸುತ್ತಿದ್ದ ಸುಂಕವನ್ನು ರದ್ದು ಮಾಡಿರುವುದು ಕ್ಷೇತ್ರಕ್ಕೆ ಮೀನುಗಾರಿಕೆ ಅನುಕೂಲವಾಗಲಿದೆ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.

ಈ ಒಪ್ಪಂದವು ಕೇಂದ್ರ ಸರಕಾರದ ಜನ ಕೇಂದ್ರಿತ ವ್ಯಾಪಾರ ರಾಜತಾಂತ್ರಿಕತೆಗೆ ಸಾಕ್ಷಿಯಾಗಿದೆ. ಶೇ. 95ರಷ್ಟು ಕೃಷಿ ರಫ್ತುಗಳ ಮೇಲಿನ ಸುಂಕವನ್ನು ಮನ್ನಾ ಮಾಡುವ ಮೂಲಕ ರೈತರಿಗೆ ಮತ್ತು ಶೇ. 99ರಷ್ಟು ಸಾಗರ ಉತ್ಪನ್ನ ರಫ್ತುಗಳ ಮೇಲೆ ಶೂನ್ಯ ಸುಂಕ ಮಾಡಿರುವುದು ಮೀನುಗಾರರಿಗೆ ಪ್ರಯೋಜನವಾಗಲಿದೆ.ಇದರಿಂದಾಗಿ ಭಾರತದ ರಫ್ತುದಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ.

ಮಂಗಳೂರು: ಇಡಿ ಇಲಾಖೆ ದುರ್ಬಳಕೆ ಮಾಡಿದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ : ಐವನ್ ಡಿಸೋಜ – vishwanews24

ಭಾರತದಿಂದ ರಫ್ತಾಗುವ ಸಿಗಡಿಗೆ ಬ್ರಿಟನ್‌ನಲ್ಲಿ ಈಗ ಶೇ. 4.2ರಿಂದ ಶೇ. 8.5ರ ವರೆಗೆ ತೆರಿಗೆ ಇದೆ. ಒಪ್ಪಂದ ಜಾರಿಗೆ ಬಂದು ಈ ಎಲ್ಲ ತೆರಿಗೆ ಶೂನ್ಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply