ಉಡುಪಿ: ಭಾರಿ ವಾಹನಗಳ ಸಂಚಾರ ನಿಷೇಧ – vishwanews24
ಉಡುಪಿ: ಭಾರಿ ವಾಹನಗಳ ಸಂಚಾರ ನಿಷೇಧ
ಉಡುಪಿ: ರಾಷ್ಟ್ರಿಯ ಹೆದ್ದಾರಿ ೧೬೯ ರ ಕಿ.ಮೀ.೧೨೪.೮೩, ಕಿ.ಮೀ. ೧೨೫.೯೩, ಕಿ.ಮೀ ೧೩೦.೦೩ ಮತ್ತು ಕಿ.ಮೀ.೧೩೩.೩೦ ಗಳಲ್ಲಿ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ, ತನಿಕೋಡ್ನೊಂದ ಎಸ್.ಕೆ ಬಾರ್ಡರ್ವರೆಗೆ (ಕಿ.ಮೀ.೧೨೩.೮೦ ರಿಂದ ಕಿ.ಮೀ.೧೪೧.೦೦ ರವರೆಗೆ) ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿ, ಸದರಿ ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಹ ಸಂಚಾರ ಮಾಡುವುದರಿಂದ ರಾ.ಹೆ ೧೬೯ ರ ೧೨೩.೮೦ ಕಿ.ಮೀ ತನಿಕೋಡ್ ಗೇಟ್ನಿಂದ ೧೪೧.೦೦ ಕಿ.ಮೀ ಎಸ್.ಕೆ ಬಾರ್ಡರ್ವರೆಗೆ ಅಧಿಕ ಭಾರದ ಸರಕು ಸಾಗಣಕೆ ವಾಹನಗಳ ಸಂಚಾರವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಆದೇಶಿಸಿರುತ್ತಾರೆ.
4 ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರವೆಸಗಿ, ಕೊಲೆ : ಆರೋಪಿ ಅರೆಸ್ಟ್ – vishwanews24
ಬದಲಿ ಮಾರ್ಗದ ವಿವರ: ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ ಬಾರ್ಡರ್ ಮಾರ್ಗವಾಗಿ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ-ಬಾಳೆಹೊಳೆ-ಕಳಸ-ಕುದುರೆಮುಖ-ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸುವAತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
