ಉಡುಪಿ: ಭಾರೀ ಮಳೆ: ಬೀಚ್ ಗೆ ಆಗಮಿಸುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕು: ಉಡುಪಿ ಡಿ.ಸಿ -Vishwanews24
ಉಡುಪಿ: ಭಾರೀ ಮಳೆ: ಬೀಚ್ ಗೆ ಆಗಮಿಸುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕು: ಉಡುಪಿ ಡಿ.ಸಿ -Vishwanews24
ಮೀನುಗಾರರು ಕೂಡ ಮುನ್ನೆಚ್ಚರಿಕೆ ವಹಿಸಿ..
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಐದು ದಿನ ಆರೆಂಜ್ ಎಲರ್ಟ್ ಘೋಷಿಸಲಾಗಿದ್ದು ,ವಿಶೇಷವಾಗಿ ಜಿಲ್ಲೆಗೆ ಬರುವ ಪ್ರವಾಸಿಗರು ಮುಂಜಾಗರೂಕತೆ ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಐದು ದಿನ ಭಾರೀ ಗಾಳಿ ಮಳೆಯಾಗಲಿದೆ. ಜಿಲ್ಲೆಯ ಜನರು ಮುನ್ನೆಚ್ಚರಿಕೆಯಿಂದಿರಬೇಕು. ಅದರಲ್ಲೂ ಬೀಚ್ ಗೆ ಆಗಮಿಸುವ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕು.ಸಮುದ್ರ ಪ್ರಕ್ಷ್ಯುಬ್ದವಾಗಿರುವುದರಿಂದ ನೀರಿಗಿಳಿಯಬೇಡಿ. ನೀರಿಗಿಳಿದರೆ ಸಾವುನೋವಾಗುವ ಸಾಧ್ಯತೆ ಇದೆ.
ಮೀನುಗಾರರು ಕೂಡ ಮುನ್ನೆಚ್ಚರಿಕೆ ವಹಿಸಿ.ಏನಾದರೂ ಸಮಸ್ಯೆಗಳಿದ್ದರೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಮಟ್ಟದಲ್ಲಿ ಕಂಟ್ರೋಲ್ ರೂಂನ್ನು ಸಂಪರ್ಕಿಸಿ. ಯಾವುದೇ ಸರ್ಕಾರಿ ಅಧಿಕಾರಿಗಳಿಗೂ ರಜೆ ನೀಡಿಲ್ಲ. ಎಲ್ಲಾ ಅಧಿಕಾರಿಗಳೂ ಕೇಂದ್ರ ಸ್ಥಾನದಲ್ಲಿ ಎಲರ್ಟ್ ಆಗಿರಬೇಕು. ಉಡುಪಿ ಜಿಲ್ಲಾಡಳಿತ ಮಳೆ ಎದುರಿಸಲು ಸರ್ವ ಸನ್ನಧ್ದವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
