ಉಡುಪಿ : ಮಂಗಳೂರು-ಕಾರವಾರ ಮಾರ್ಗದ ಸಾರಿಗೆ ಪುನಃ ಕಾರ್ಯಾಚರಣೆ -Vishwanews24

Featured, ಉಡುಪಿ

ಉಡುಪಿ : ಮಂಗಳೂರು-ಕಾರವಾರ ಮಾರ್ಗದ ಸಾರಿಗೆ ಪುನಃ ಕಾರ್ಯಾಚರಣೆ -Vishwanews24

ಉಡುಪಿ : ಪ್ರಸ್ತುತ ಕೋವಿಡ್-19 ಲಾಕ್‌ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕ.ರಾ.ರ.ಸಾ.ನಿಗಮದ ವತಿಯಿಂದ ಮಂಗಳೂರು-ಕಾರವಾರ ಮಾರ್ಗದಲ್ಲಿ ವೋಲ್ವೋ ಎಸಿ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 7 ರಿಂದ ಪುನಃ ಪ್ರಾರಂಭಿಸಲಾಗಿದೆ.

ಮಂಗಳೂರಿನಿOದ ಮಧ್ಯಾಹ್ನ 4 ಗಂಟೆಗೆ ಹೊರಟು ಉಡುಪಿ, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಅಂಕೋಲಾ ಮಾರ್ಗವಾಗಿ ರಾತ್ರಿ 9.45 ಕ್ಕೆ ಕಾರವಾರ ತಲುಪಲಿದ್ದು, ಮರುಪ್ರಯಾಣದಲ್ಲಿ ಬೆಳಗ್ಗೆ 6.45 ಕ್ಕೆ ಕಾರವಾರದಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಮಂಗಳೂರು ತಲುಪಲಿದೆ.

ಈ ಸಾರಿಗೆಗಳಲ್ಲಿ ಆನ್‌ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯಕ್ಕೆ www.ksrtc.in ಹತ್ತಿರದ ರಿಸರ್ವೇಶನ್ ಕೌಂಟರ್ ಅನ್ನು ಸಂಪರ್ಕಿಸುವoತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.