ಉಡುಪಿ : ಮಟ್ಟಿ ಲಕ್ಮ್ಮೀ ನಾರಾಯಣ ರಾವ್ ಇವರಿಗೆ ಸೇವಾಭೂಷಣ ಪ್ರಶಸ್ತಿ – Vishwanews24
ಉಡುಪಿ : ಮಟ್ಟಿ ಲಕ್ಮ್ಮೀ ನಾರಾಯಣ ರಾವ್ ಇವರಿಗೆ ಸೇವಾಭೂಷಣ ಪ್ರಶಸ್ತಿ – Vishwanews24
ಉಡುಪಿ : ಯಕ್ಷಗಾನ ಕಲಾರಂಗದಲ್ಲಿ ಇಪ್ಪತ್ತೇಳು ವರ್ಷ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣ ಇವರ ನೆನಪಿನಲ್ಲಿ ಸಂಸ್ಥೆ ನೀಡುವ ಸೇವಾಭೂಷಣ ಪ್ರಶಸ್ತಿಗೆ ಈ ಬಾರಿ ಕರ್ಣಾಟಕ ಬ್ಯಾಂಕ್ನ ನಿವೃತ್ತ ಅಧಿಕಾರಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಮಟ್ಟಿ ಲಕ್ಮ್ಮೀ ನಾರಾಯಣ ರಾವ್ ಇವರು ಆಯ್ಕೆಗೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ ೨೮, ೨೦೨೨, ಸೋಮವಾರ ಸಂಜೆ ೫.೩೦ಕ್ಕೆ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಜರಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.
ಇದನ್ನೂ ಓದಿ :
