ಉಡುಪಿ : ಮನೆಯಲ್ಲಿರುವ ಶಸ್ತ್ರಗಳಿಗೆ ಪೂಜೆ ಮಾಡಿ, ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು : ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ – Vishwanews24

Featured, ಉಡುಪಿ

ಉಡುಪಿ : ಮನೆಯಲ್ಲಿರುವ ಶಸ್ತ್ರಗಳಿಗೆ ಪೂಜೆ ಮಾಡಿ, ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು : ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ

ಉಡುಪಿ : ಮನೆಯಲ್ಲಿರುವ ಶಸ್ತ್ರಗಳಿಗೆ ಪೂಜೆ ಮಾಡಿ, ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು ಎಂದು ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ನಡೆದ ದುರ್ಗಾ ದೌಡ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಏಂಜೆಂಟರ ವಿರುದ್ಧ ಹೋರಾಟ ಆರಂಭಿಸಿದಕ್ಕಾಗಿ ದುರ್ಗಾ ದೌಡ್ ಮಾಡಲಾಗಿದೆ. ಕಾಂಗ್ರೆಸ್ ಹಿಂದೂಗಳ ಮೇಲೆ ಸುಳ್ಳು ಉಗ್ರವಾದದ ನೂರಾರು ಕೇಸು ದಾಖಲಿಸಿದೆ. ಖಡ್ಗ ಹಿಡಿದು ಮೆರವಣಿಗೆ ಮಾಡಲು ಅನುಮತಿ ಸಿಗಲಿಲ್ಲ. ಮೆರವಣಿಗೆಯಲ್ಲಿ ನಾವು ಬಹಿರಂಗವಾಗಿ ಶಸ್ತ್ರಾಸ್ತ್ರ ಬಳಕೆ ಮಾಡಿಲ್ಲ. ಸಂದರ್ಭ ಒದಗಿ ಬಂದಾಗ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ವೃತ್ತಿ ಜೀವನದಲ್ಲಿ ಬದಲಾವಣೆ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಈ ವೇಳೆ ಶೀಘ್ರದಲ್ಲೇ ಆರ್.ಎಸ್.ಎಸ್ ಗೆ ನೂರು ವರ್ಷ ಪೂರ್ಣವಾಗುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಊರು ಹಳ್ಳಿ ಮನೆಗೆ ಸಂಘ ತಲುಪುತ್ತದೆ. ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪುತ್ತದೆ. ಪ್ರತಿ ಹಿಂದೂಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು. ಆಯುಧ ಪೂಜೆಗೆ ಹಳೇ ಸೈಕಲ್, ಗ್ರೈಂಡರ್, ಮಿಕ್ಸಿಗೆ ಪೂಜೆ ಮಾಡಬೇಡಿ. ಮನೆಯಲ್ಲಿರುವ ಶಸ್ತ್ರಗಳಿಗೆ ಪೂಜೆ ಮಾಡಿ, ಶಸ್ತ್ರ ಪೂಜೆಯ ಜೊತೆಗೆ ಶಸ್ತ್ರ ಬಳಸುವ ಮನೋ ಸ್ಥೈರ್ಯ ಮುಂದೆ ಬೆಳೆಸೋಣ. ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು ಎಂದು ಹೇಳಿದರು.

 

Leave a Reply