ಉಡುಪಿ: ಮನೆ ಬಾಗಿಲು ಮುರಿದು 18.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಕಳ್ಳತನ – Vishwanews24

Featured, ಉಡುಪಿ

ಉಡುಪಿ: ಮನೆ ಬಾಗಿಲು ಮುರಿದು 18.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಕಳ್ಳತನ – Vishwanews24

ಉಡುಪಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಸುಮಾರು ನಗದು, ಚಿನ್ನಾಭರಣ ಸಹಿತ ಸುಮಾರು 18.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಎಗರಿಸಿದ ಘಟನೆ ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್‌ನ ಜಯಗಣೇಶ ಬೀಡು ಎಂಬವರ ಮನೆಯಲ್ಲಿ ನಡೆದಿದೆ.

ನ.6 ರ ಸಂಜೆ 6.15 ರ ನ.7 ರ ಬೆಳಿಗ್ಗೆ 10:45 ಗಂಟೆ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳ ಪ್ರವೇಶಿಸಿ, ಒಳಗಿನ ಬಾಗಿಲಿನ ಚಿಲಕದ ಬದಿ ಮುರಿದು ಮಾಸ್ಟರ್‌ ಬೆಡ್‌ರೂಮಿನ ಕೀ ತೆಗೆದು ಒಳಪ್ರವೇಶಿಸಿ, ಕಪಾಟನ್ನು ಹಾಗೂ ಲಾಕರ್‌ನ್ನು ಬಲಾತ್ಕಾರವಾಗಿ ಮೀಟಿ ತೆಗೆದು ಕಳ್ಳತನವೆಸಗಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳೆಗಳು, ಮುತ್ತಿನ ಸರ, ಉಂಗುರ, ವಜ್ರದ ಕಿವಿ ಓಲೆ, ನೆಕ್ಲೇಸ್‌ ಮುಂತಾದ ರೂ. 14 ಲಕ್ಷ ಮೌಲ್ಯದ 332 ಗ್ರಾಂ ತೂಕ ಚಿನ್ನಾಭರಣಗಳು ಹಾಗೂ ಗೆಸ್ಟ್‌ ರೂಮಿನ ಕಪಾಟಿನ ಲಾಕರ್‌ ಒಡೆದು ಅದರಲ್ಲಿದ್ದ ರೂಪಾಯಿ. 3,00,000 ಹಣವನ್ನು ಮತ್ತು ಸುಮಾರು 1,35,000 ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 18,35,000 ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.