ಉಡುಪಿ: ಮಲ್ಪೆ ಬೀಚ್ಗೆ ಪ್ರವಾಸಕ್ಕೆಂದು ಬಂದಿದ್ದ ಯುವಕ ನೀರುಪಾಲು – Vishwanews24
ಉಡುಪಿ: ಮಲ್ಪೆ ಬೀಚ್ಗೆ ಪ್ರವಾಸಕ್ಕೆಂದು ಬಂದಿದ್ದ ಯುವಕ ನೀರುಪಾಲು
ಉಡುಪಿ: ಮಲ್ಪೆ ಬೀಚ್ಗೆ ಪ್ರವಾಸಕ್ಕೆಂದು ಬಂದಿದ್ದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ(ಎ.21) ನಡೆದಿದೆ. ಮಂಡ್ಯ ಮೂಲದ 21 ವರ್ಷದ ನಾಗೇಂದ್ರ ಪ್ರಸಾದ್ ಜಿ. ಆರ್. ಮೃತ ಯುವಕ. ನಾಗೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ ಲಿಫ್ಟ್ ಅಪರೇಟರ್ ಅಗಿದ್ದರು ಎನ್ನಲಾಗಿದೆ.
ಒಟ್ಟು ಐವರು ಸ್ನೇಹಿತರು ರವಿವಾರ ಮಲ್ಪೆ ಬೀಚ್ಗೆ ಬಂದಿದ್ದಾರೆ. ಈ ವೇಳೆ ನೀರಿನಲ್ಲಿ ಆಡುತ್ತಿದ್ದಾಗ ನಾಗೇಂದ್ರ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ತತ್ಕ್ಷಣ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದರು ಎನ್ನಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
