ಉಡುಪಿ : ಮಲ್ಪೆ ಬೀಚ್‌ನಲ್ಲಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋದ ಮೂವರು ಪ್ರವಾಸಿಗರು ; ಓರ್ವ ಮೃತ್ಯು… Vishwanews24

Featured, ಉಡುಪಿ

ಉಡುಪಿ : ಮಲ್ಪೆ ಬೀಚ್‌ನಲ್ಲಿ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂವರು ಪ್ರವಾಸಿಗರು ; ಓರ್ವ ಮೃತ್ಯು…

ಉಡುಪಿ: ನೀರಿಗಿಳಿದ ಮೂರು ಪ್ರವಾಸಿಗರರು ಸಮುದ್ರಪಾಲಾದ ಘಟನೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ಸಂಭವಿಸಿದೆ. ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂವರ ಪೈಕಿ ಓರ್ವ ಸಾವನ್ನಪ್ಪಿದರೆ ಮತ್ತಿಬ್ಬರನ್ನು ರಕ್ಷಿಸಲಾಗಿದೆ.

ಮೃತರನ್ನು ಹಾಸನ ಜಿಲ್ಲೆಯ ದಾಬೆಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಸಂತೋಷ್ ಹಾಗೂ ಮತ್ತೊಬ್ಬರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬೆ ಬೇಲೂರಿನಿಂದ 20 ಜನರು ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ.

ಈ ಬಾರಿ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದ್ದು ಕೋಟ ಶ್ರೀನಿವಾಸ ಪೂಜಾರಿ ಗೆಲುವು ನಿಶ್ಚಿತ: ಯಶ್ಪಾಲ್ ಸುವರ್ಣ – Vishwanews24

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನು ರಕ್ಷಿಸಿ, ದಡಕ್ಕೆ ತಂದಿದ್ದಾರೆ. ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply