ಉಡುಪಿ: ಮಲ್ಪೆ ಬೀಚ್​ –  ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ರಕ್ಷಿಸಿದ  ಜೀವ ರಕ್ಷಕ ದಳ – Vishwnaews24

Featured, ಉಡುಪಿ

ಉಡುಪಿ: ಮಲ್ಪೆ ಬೀಚ್​ –  ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ರಕ್ಷಿಸಿದ  ಜೀವ ರಕ್ಷಕ ದಳ

ಉಡುಪಿ: ಈಜುವ ವೇಳೆ ಮಲ್ಪೆ ಬೀಚ್​ನಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ನಡೆದಿದೆ.

ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬಿಜಾಪುರ ಮೂಲದ ಮೋಬಿನ್, ಸೋಫಿಯಾ, ಅಹ್ಮದ್ ಮತ್ತು ಮೊಹಮ್ಮದ್ ಎಂಬುವರನ್ನು ರಕ್ಷಿಸಲಾಗಿದೆ.

ಬಿಜಾಪುರ ಮೂಲದವರಾದ ಇವರು ಮಲ್ಪೆ ಬೀಚ್​​ಗೆ ಪ್ರವಾಸಕ್ಕೆಂದು ಬಂದಿದ್ದು, ಈ ವೇಳೆ ಕಡಲಿಗೆ ಇಳಿಯದಂತೆ ಇಲ್ಲಿನ ಪ್ರವಾಸಿಗರಿಗೆ ಎಚ್ಚರಿಕೆಯನ್ನೂ ನೀಡಿದರೂ ಈಜಲು ತೆರಳಿದ ವೇಳೆ ಸಮುದ್ರದ ಅಲೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಈ ವೇಳೆ ನಾಲ್ವರನ್ನು ಜೀವ ರಕ್ಷಕ ದಳದ ಭರತ್​, ಮಧು, ರವಿ ಹಾಗೂ ವಿನೋದ್​​ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ.

ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ : ಸಚಿವ ಅಶ್ವತ್ಥನಾರಾಯಣ – Vishwnaews24

Leave a Reply