ಉಡುಪಿ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆರೋಗ್ಯ ಸೇವೆ ನಿರಂತರವಾಗಿರಲಿ: ಪ್ರಮೋದ್ ಮಧ್ವರಾಜ್ – Vishwanews24
ಉಡುಪಿ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆರೋಗ್ಯ ಸೇವೆ ನಿರಂತರವಾಗಿರಲಿ: ಪ್ರಮೋದ್ ಮಧ್ವರಾಜ್ – Vishwanews24
ಉಡುಪಿ: ಡಾ. ಬಿ. ಆರ್ ಶೆಟ್ಟಿಯವರು 200 ಬೆಡ್ ಗಳ ಅಂತಾರಾಷ್ಟ್ರೀಯ ಗುಣಮಟ್ಟದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿಕೊಡುವುದಾಗಿ ಮುಂದೆ ಬಂದಿದ್ದರು.ಅದರಂತೆ ಸರಕಾರದೊಂದಿಗೆ ಚರ್ಚಿಸಿ ಸಂಪೂರ್ಣ ಉಚಿತವಾಗಿ ಗರ್ಬಿಣಿ ಮಹಿಳೆಯರು, ಬಾಣಂತಿ, ನವಜಾತ ಶಿಶುಗಳು ಮತ್ತು ಮಕ್ಕಳಿಗೆ ಆಸ್ಪತ್ರೆ ಕಟ್ಟಿಸಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿವುದಾಗಿ ಹೇಳಿದ್ದರು.ಅಲ್ಲದೆ ಈ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆ ಮತ್ತು ಅಭಿವೃದ್ದಿಯ ವೆಚ್ಚಕ್ಕಾಗಿ ಸರಕಾರಕ್ಕೆ ಮನವಿ ಮಾಡಿದ ಮೇರೆಗೆ ಗುತ್ತಿಗೆಯಾಧಾರದಲ್ಲಿ 400 ಬೆಡ್ ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸುವುದಾಗಿ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.
ನನಗೆ ಕೇವಲ ಜನರಿಗೆ ವ್ಯವಸ್ಥಿತವಾಗಿ ಸುಸಜ್ಜಿತವಾಗಿ ಆಸ್ಪತ್ರೆಯನ್ನು ನಿರ್ಮಿಸಿಕೊಡಬೇಕೆಂಬ ಹಂಬಲವಿತ್ತು, ಅದನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿತ್ತು.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬಿ. ಆರ್ ಶೆಟ್ಟಿ ಸಂಸ್ಥೆಯವರು ನಿರ್ಮಿಸಿದ್ದ 200 ಬೆಡ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸರಕಾರಕ್ಕೆ ದಾನವಾಗಿ ನೀಡುವುದಾಗಿ ತಿಳಿಸಿದ್ದಾರೆ,
ಈ ಆಸ್ಪತ್ರೆಯನ್ನು ಯಾರು ಬೇಕಿದ್ದರೂ ನಡೆಸಲಿ ಅಥವಾ ಮುಂದುವರಿಸಲಿ, ಈಗಿರುವುದಕ್ಕಿಂತಲೂ ಉತ್ತಮ ಸೇವೆ ಮುಂದುವರಿಯಲಿ ಎಂಬುದು ನನ್ನ ಆಗ್ರಹವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
