ಉಡುಪಿ : ಮಹಿಳೆಯರ ವಿವಾಹದ ವಯಸ್ಸು 21ಕ್ಕೆ ಏರಿಕೆ – ಹಿಂದೂಗಳಿಗೆ ಅನ್ಯಾಯ: ಸ್ವರ್ಣವಲ್ಲಿ ಸ್ವಾಮಿಜಿ ಅಸಮಾಧಾನ – Vishwanews24

Featured, ಉಡುಪಿ

ಉಡುಪಿ : ಮಹಿಳೆಯರ ವಿವಾಹದ ವಯಸ್ಸು 21ಕ್ಕೆ ಏರಿಕೆ – ಹಿಂದೂಗಳಿಗೆ ಅನ್ಯಾಯ: ಸ್ವರ್ಣವಲ್ಲಿ ಸ್ವಾಮಿಜಿ ಅಸಮಾಧಾನ – Vishwanews24

ಉಡುಪಿ: ಮಹಿಳೆಯರ ಕನಿಷ್ಠ ವಿವಾಹದ ವಯಸ್ಸನ್ನು 21ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ವಿರುದ್ಧ ಸ್ವರ್ಣವಲ್ಲಿ ಸ್ವಾಮಿಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಕೃಷ್ಣಮಠದ ವಿಶ್ವಾರ್ಪಣಂ ಧಾರ್ಮಿಕ ಸಭೆಯಲ್ಲಿ ಮಾತಮಾಡಿದ ಸ್ವಾಮೀಜಿ, “ಕ್ರೈಸ್ತರಿಗೆ ಮುಸ್ಲಿಮರಿಗೆ ವಿವಾಹದ ಕಾನೂನು ಬೇರೆ ಇದೆ. ಈ ನಿರ್ಧಾರ ಹಿಂದೂಗಳಿಗೆ ಅನ್ಯಾಯವಾಗುತ್ತದೆ .ನೀವು ಮಾಡುತ್ತಿರುವ ಹೊಸ ನಿರ್ಣಯ ಹಿಂದೂಗಳಿಗೆ ಮಾತ್ರ ಯಾಕೆ? ಎಲ್ಲರಿಗೂ ಅನ್ವಯವಾಗುವ ರೀತಿ ನೀವು ಯಾಕೆ ಕಾನೂನು ಕಾಯ್ದೆ ಯಾಕೆ ರೂಪಿಸುತ್ತಿಲ್ಲ. ಎಲ್ಲರಿಗೆ ಸಮಾನ ಕಾಯ್ದೆ ಜಾರಿಗೆ ತನ್ನಿ ಅದಕ್ಕೆ ನಮ್ಮ ಪೂರ್ತಿ ಬೆಂಬಲವಿದೆ ಎಂದು ಹೇಳಿದರು.

ಮುಸ್ಲಿಮರ ಕಾನೂನಲ್ಲಿ ವಿವಾಹದ ವಯಸ್ಸು ಈಗಲೂ 15 ಇದೆ. ಈ ಕಾನೂನಿನ ಪ್ರಕಾರ ಮುಸ್ಲಿಮರ ಜನಸಂಖ್ಯೆ ಏರಿಕೆ ಪ್ರಮಾಣ ಜಾಸ್ತಿ ಇದೆ. ಹಿಂದೂಗಳ ಜನಸಂಖ್ಯೆ ಅದರ ಕಮ್ಮಿ ಇದೆ. ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿರುವ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಸಂತರು ಕಳವಳಗೊಂಡಿದ್ದಾರೆ. ನಮ್ಮ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯ ಇದೆ. ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಿವಿ ಹಿಂಡಿದ್ದಾರೆ.

ಜಪಾನ್ ಬ್ರಿಟನ್ ಅಮೆರಿಕದಲ್ಲಿ ಮದುವೆಗೆ 16ರಿಂದ 18 ವಯೋಮಿತಿ ಇದೆ. ಸರಕಾರ ಕೊಡುವ ವೈಜ್ಞಾನಿಕ ಕಾರಣಗಳು ಬಗ್ಗೆ ನಮಗೆ ಒಪ್ಪಿಗೆ ಇದೆ ಆದರೆ ಹೆಣ್ಣುಮಕ್ಕಳಿಗೆ ತೊಂದರೆ ಆಗಬಾರದು. ತಡವಾದ ವಿವಾಹದಿಂದ ವಿಚ್ಛೇದನ ಜಾಸ್ತಿಯಾಗಿದೆ. ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ. ವಿವಾಹದ ವಯಸ್ಸನ್ನು ಸರಕಾರ ಏರಿಕೆ ಮಾಡಿರುವುದರಿಂದ ಇನ್ನಷ್ಟು ಸಮಸ್ಯೆಗಳು ಬಾಧಿಸಲಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದ ನಂತರವೇ ಗುಂಪು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ : ರಾಹುಲ್ ಗಾಂಧಿ – Vishwanews24