ಉಡುಪಿ : ಮಾದಕ ವಸ್ತು ಮಾರಾಟ ಪ್ರಕರಣ: 9 ಮಂದಿ ಆರೋಪಿಗಳ ಬಂಧನ – vishwanews24
ಉಡುಪಿ : ಮಾದಕ ವಸ್ತು ಮಾರಾಟ ಪ್ರಕರಣ: 9 ಮಂದಿ ಆರೋಪಿಗಳ ಬಂಧನ
ಉಡುಪಿ : ಶಿರ್ವ ಮತ್ತು ಉಡುಪಿ ನಗರ ಪೊಲೀಸರ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ನಾಜ್, ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಮತ್ತು ಶಿವಮೊಗ್ಗ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. ಬಂಧಿತ ಆರೋಪಿಗಳು.
ಮಂಗಳೂರು : ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ – vishwanews24
ಸೆ.22ರಂದು ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಎಂಬಲ್ಲಿ ಕೆಲವು ವ್ಯಕ್ತಿಗಳು ಎರಡು ಕಾರು, ಒಂದು ಸ್ಕೂಟರ್‌ನಲ್ಲಿ ಮಾದಕ ವಸ್ತುಗಳನ್ನು ಹೊಂದಿರುವುದಾಗಿ ಬಂದ ಮಾಹಿತಿಯಂತೆ ಸಂಜೆ ವೇಳೆ ದಾಳಿ ನಡೆಸಿದ ಪೊಲೀಸರು, ಅಲ್ನಾಜ್, ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಅಜಯ್ ಕುಮಾರ್, ಇಮ್ತಿಯಾಜ್, ಸಂತೋಷ್ ದೇವಾಡಿಗ ಎಂಬವರನ್ನು ಬಂಧಿಸಿದರು.
ಇವರಿಂದ 67,714ರೂ. ಮೌಲ್ಯದ 1354.28 ಗ್ರಾಂ ತೂಕದ ಗಾಂಜಾ, 1,30,960ರೂ. ಮೌಲ್ಯದ 32.74 ಗ್ರಾಂ ತೂಕದ ಮೆಥಾ ಪಿಟಾಮೈನ್, ಕೃತ್ಯಕ್ಕೆ ಬಳಸಿದ ಎರಡು ಕಾರು, ಒಂದು ಸ್ಕೂಟರ್, 9 ಮೊಬೈಲ್‌ಗಳನ್ನು, 2 ತೂಕದ ಮಿಷಿನ್, 75,010ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿರ್ವ ಪೊಲೀಸ್ ಠಾಣಾ ಎಸ್ಸೈ ಅನಿಲ್ ಪ್ರಕರಣದ ತನಿಖೆಯನ್ನು ಮುಂದುವರೆಸಿದಾಗ ಆರೋಪಿಗಳು ಕೇರಳ ರಾಜ್ಯದ ಉಪ್ಪಳ ಎಂಬಲ್ಲಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಆರೋಪಿಗಳು ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್‌ಗಳನ್ನು ಹೊಂದಿದ್ದು, ಕ್ರಿಮಿನಲ್ ಚಟುವಟಿಕೆಯಲ್ಲಿ ಸಕ್ರೀಯವಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಚಲಿಸುತ್ತಿದ್ದಾಗಲೇ ಸ್ಲೀಪರ್ ಬಸ್‌ನಲ್ಲಿ ಬೆಂಕಿ : 9 ಮಂದಿ ಸಜೀವ ದಹನ – vishwanews24
ಮತ್ತೋರ್ವ ಆರೋಪಿ ಸೆರೆ: ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಸೈ ಭರತೇಶ್ ಕಂಕಣವಾಡಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸೆ.23ರಂದು ನಸುಕಿನ ವೇಳೆ 12.30ರ ಸುಮಾರಿಗೆ ಉಡುಪಿ ವಾದಿರಾಜ ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಿ, ಗಾಂಜಾ ದಾಸ್ತಾನು ಇರಿಸಿದ್ದ ಶ್ರೀವತ್ಸ ಕೆ.ಜಿ. ಎಂಬಾತನನ್ನು ಬಂಧಿಸಿದರು.
ಬಂಧಿತನಿಂದ 83,000ರೂ. ಮೌಲ್ಯದ 1 ಕೆಜಿ 659.91 ಗ್ರಾಂ ಗಾಂಜಾ ಮತ್ತು ನಗದು 1,26,500ರೂ., ಡಿಜಿಟಲ್ ಸ್ಕೇಲ್ ಹಾಗೂ ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಸ್ಟ್ಯಾನ್ಲಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ 1, ಪೈಸಲ್ ವಿರುದ್ಧ ಮಲ್ಪೆ ಠಾಣೆಯಲ್ಲಿ 1 ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 1 ಹಾಗೂ ಮಣಿಪಾಲ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ದಾಖಲಾಗಿವೆ.
ಇಮ್ತಿಯಾಜ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ 3, ಬ್ರಹ್ಮಾವರ ಠಾಣೆಯಲ್ಲಿ 1 ಕೊಲೆ, ಮಲ್ಪೆ ಠಾಣೆಯಲ್ಲಿ 1, ಮಣಿಪಾಲದಲ್ಲಿ 3 ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಅಜಯ್ ಕುಮಾರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ 1 ದರೋಡೆ ಪ್ರಕರಣ, ಮಣಿಪಾಲ ಠಾಣೆಯಲ್ಲಿ 1, ಶಿರ್ವಾ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 3 ಪ್ರಕರಣ ಗಳು ದಾಖಲಾಗಿವೆ. ಆರೋಪಿ ಸಂತೋಷ ದೇವಾಡಿಗ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ 2 ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿವೆ.
