ಉಡುಪಿ: ಮಾರ್ಚ್ 6ರಿಂದ 8ರವರೆಗೆ ತಿಂಗಳೆ ಧರ್ಮ ಕಲೆ ಸಾಹಿತ್ಯೋತ್ಸವ-ಗ್ರಾಮೋತ್ಸವ : ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ – Vishwanews24
ಉಡುಪಿ: ಮಾರ್ಚ್ 6ರಿಂದ 8ರವರೆಗೆ ತಿಂಗಳೆ ಧರ್ಮ ಕಲೆ ಸಾಹಿತ್ಯೋತ್ಸವ-ಗ್ರಾಮೋತ್ಸವ : ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ
ಉಡುಪಿ: ಸುಮಾರು 63 ವರ್ಷಗಳ ಇತಿಹಾಸವಿರುವ ತಿಂಗಳೆ ಧರ್ಮ ಕಲೆ ಸಾಹಿತ್ಯೋತ್ಸವ ಕಾರ್ಯಕ್ರಮವೂ ಮಾರ್ಚ್ ದಿನಾಂಕ 6 ರಿಂದ ಆರಂಭಗೊಂಡು 8 ರವರೆಗೆ ನಡೆಯಲಿದೆ ಎಂದು ಅರಸು ಪಟ್ಟದ ಗುರಿಕಾರ , ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ , ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ಕಾರ್ಯಕ್ರಮವೂ “ಶಿವ ಪಾರಮ್ಯ”ಶೀರ್ಷಿಕೆಯಡಿಯಲ್ಲಿ ನಡೆಯಲಿದ್ದು ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ ಮೋಹನ್ ಆಳ್ವಾ ವಹಿಸಲಿದ್ದು ಕೆ.ಎಸ್ ನಿತ್ಯಾನಂದ ,ಚಿಕ್ಕಮಗಳೂರು ಗೌರವ ಉಪಸ್ಥಿತಿ ಇರಲಿದ್ದಾರೆ ಎಂದರು.
ಅಂದು ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ತಿಂಗಳೆ ಪ್ರಶಸ್ತಿ , ಮಂಜುನಾಥ ಅಡಿಗ ಉಪ್ಪಳರಿಗೆ ಸೇವಾ ಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಅವರು ತಿಳಿಸಿದರು.
ಡಾ ವೀಣಾ ಬನ್ನಂಜೆ ಹಾಗೂ ಎನ್ ಆರ್ ದಾಮೋದರ ಶರ್ಮ ” ಶಿವ ಪಾರಮ್ಯ” ಕುರಿತಾಗಿ ಉಪನ್ಯಾಸ ಹಾಗೂ ಜ್ಯೋತಿ ಮಹಾದೇವ್,ಅಮೃತ ಕಡಿಯಾಳಿ,ಪ್ರಜ್ಞಾ ಮಾರ್ಪಳ್ಳಿ,ರೇವತಿ ನಾಡಿಗೇರ್, ರಮ್ಯ ಸೀತಾನದಿ ಇವರಿಂದ ಕವಿಸಮಯ ನಡೆಯಲಿದೆ.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಯಕ್ಷಗುರು ಸಂಜೀವ ಸುವರ್ಣ ಬಿಡುಗಡೆಗೊಳಿಸಿದರು.
ಮಾರ್ಚ್ 6 ರಂದು ನಾಡ್ಪಲು ಗ್ರಾಮೋತ್ಸವ,ಮಾರ್ಚ್ 8 ರಂದು ತಿಂಗಳೆ ಧರ್ಮ ಕಲೆ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಾಡ್ಪಾಲು ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್,ಕೆಳಚಾವಡಿ ಪ್ರಕಾಶ ಶೆಟ್ಟಿ, ಕಿರಣ್ ಕುಮಾರ್ ಬೈಲೂರು, ಸದಾನಂದ,ರಮೇಶ್,ಉಪಸ್ಥಿತರಿದ್ದರು.
ಅಯೋಧ್ಯೆಗೆ ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ವಿಶೇಷ ರೈಲು – Vishwanews24
