ಉಡುಪಿ: ಕೆ.ರಾಘವೇಂದ್ರ ಕಿಣಿ ಅವರ ನೇತೃತ್ವದಲ್ಲಿ ಮೇ 11ರಂದು ಕಡಿಯಾಳಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಉಪನಯನ – Vishwanews24

Featured, ಉಡುಪಿ

ಉಡುಪಿ: ಮೇ 11ರಂದು ಕಡಿಯಾಳಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಉಪನಯನ

ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರು ಮತ್ತು ಕಡಿಯಾಳಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಅವರ ನೇತೃತ್ವದಲ್ಲಿ ಮೇ 11ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಆವರಣದಲ್ಲಿ ಸಾಮೂಹಿಕ ಉಪನಯನ ಆಯೋಜಿಸಲಾಗಿದೆ.

ಮೇ 11ರಂದು ಕಡಿಯಾಳಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಉಪನಯನ – Udupixpress | ಉಡುಪಿ Xpress

ಈ ಬ್ರಹ್ಮೋಪದೇಶಕ್ಕೆ ತಗಲುವ ಎಲ್ಲಾ ವೆಚ್ಚವು ಸಂಪೂರ್ಣ ಉಚಿತವಾಗಿದ್ದು, ಈ ಕಾರ್ಯಕ್ರಮದಲ್ಲಿ ಉಚಿತ ಉಪನಯನ ಸಂಸ್ಕಾರ ಬಯಸುವ ವಟುಗಳ ಪೋಷಕರು 9008190489 ಈ ಸಂಖ್ಯೆಗೆ ಸಂಪರ್ಕಿಸುವಂತೆ ಸೂಚಿಸಲಾಗಿದೆ. ಹಾಗೂ ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿಯವರ ದ್ವಿತೀಯ ಮಗನಾದ ರಚಿತ್ ಕಿಣಿಗೂ ಉಪನಯನ ನಡೆಯಲಿದ್ದು ಅರ್ಹ ಬಡ ವಟುಗಳಿಗೆ ಅವಕಾಶವಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ನೌಕರರ ಮುಷ್ಕರ : ರಾಜ್ಯಾಧ್ಯಂತ ಜಿಲ್ಲಾಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್, ರೋಗಿಗಳ ಪರದಾಟ – Vishwanews24

Leave a Reply