ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ – vishwanews24

Featured, ಉಡುಪಿ

ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ

ಉಡುಪಿ: ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿವಂಗತ ಪೊಲೀಸ್ ಕಾನ್ಸ್‌ಟೇಬಲ್   ಶ್ರೀ ಅರ್ಜುನ ಶಂಕರ ನೆಲ್ಲೂರ ರವರ ಅವಲಂಬಿತರಿಗೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1,45,00,000 ಮೊತ್ತದ ವಿಮಾ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಲಾಯಿತು.

2023-24ನೇ ಸಾಲಿನಲ್ಲಿ ಸಿ.ಎಸ್.ಪಿ. ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಜುನ ನೆಲ್ಲೂರ ರವರು, ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.

ವಿಮೆ ಇಲ್ಲದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್‌ ನಿರಾಕರಣೆ : ಕೇಂದ್ರಕ್ಕೆ ಸುಪ್ರೀಂ ನಿದೇರ್ಶನ ! vishwanews24

ಆ 04ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಸ್ ಬಿ ಐ ನ ಪ್ರಾದೇಶಿಕ ವ್ಯವಹಾರ ಕಚೇರಿಯ ರೀಜನಲ್ ಮ್ಯಾನೇಜರ್ ಬಿ ಪ್ರಕಾಶ್ ಅಡಿಗ ಅವರು ಪೊಲೀಸ್ ಅಧೀಕ್ಷಕರು ಹರಿರಾಂ ಶಂಕರ್ ಅವರ ಸಮ್ಮುಖದಲ್ಲಿ ಕುಟುಂಬದ ಸದಸ್ಯರ ವೈಯಕ್ತಿಕ ಅಪಘಾತ ವಿಮೆಯ ಚೆಕ್ಕನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಸ್.ಬಿ.ಐ.. ನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್, ಮಲ್ಪೆ ಶಾಖೆಯ ಮೆನೇಜರ್ ರಾಜೇಶ್ ಗಂಗೊಳ್ಳಿ,ಇತರ ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ, ತನ್ಮಯ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮೃತ ಪೇದೆಯವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಕಟಪಾಡಿ : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್  – vishwanews24

ಪೊಲೀಸ್ ಇಲಾಖೆ ಮತ್ತು ಎಸ್.ಬಿ.ಐ. ನಡುವಿನ ಒಪ್ಪಂದದಂತೆ ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿಯವರ ಕುಟುಂಬಕ್ಕೆ ಈ ವಿಮಾ ಸೌಲಭ್ಯ ದೊರಕಿದೆ. ಇಂಥ ವಿಮಾ ಯೋಜನೆಗಳು ಎಲ್ಲಾ ಎಸ್‌ಬಿಐ ಶಾಖೆಗಳಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪಡೆದುಕೊಳ್ಳಬೇಕು ಎಂದು ಪ್ರಕಾಶ ಅಡಿಗ ಅವರು ವಿನಂತಿಸಿದರು.

Leave a Reply