ಉಡುಪಿ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು  – Vishwanews24

Featured, ಉಡುಪಿ

ಉಡುಪಿ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು 

ಮಲ್ಪೆ : ಅನಾರೋಗ್ಯದಿಂದ ಅಸ್ವಸ್ಥಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಶೀಲ್ ರಘುರಾಮ್ ಶೆಟ್ಟಿ (42) ಮೃತಪಟ್ಟವರು.

ಮುಂಬಾಯಿ ನಿವಾಸಿಯಾಗಿದ್ದ ಇವರು ಕಳೆದ ಡಿ.28 ರಂದು ಊರಿಗೆ ಬಂದಿದ್ದರು. ಮಲ್ಪೆಯ ಲಾಡ್ಜ್‌ ವೊಂದರಲ್ಲಿ ತಂಗಿದ್ದ ಅವರು, ಜ.6 ರಂದು ರಾತ್ರಿ ರೋಮಿನಲ್ಲಿ ಉಳಿದುಕೊಂಡಿದ್ದರು. ಆದರೆ ಮರುದಿನ ಡಿ.7 ರಂದು ರೂಮ್‌ ನಿಂದ ಹೊರಗೆ ಬಾರದೇ ಇದ್ದುದರಿಂದ ಸಂಶಯಗೊಂಡು ಅವರ ಸಂಬಂಧಿ ಅಕ್ಷಿತ್ ಶೆಟ್ಟಿ ಅವರು ರಾತ್ರಿ ಸುಮಾರು 11:00 ಗಂಟೆಗೆ ಹೊಟೇಲ್‌ ಸಿಬ್ಬಂದಿ ಹಾಗೂ ಪೊಲೀಸರ ಸಮಕ್ಷಮದಲ್ಲಿ ರೂಮ್‌ನ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಸುಶೀಲ್‌ ರಘುರಾಮ್‌ ಶೆಟ್ಟಿರವರು ಮಲಗಿದ ಸ್ಥಿತಿಯಲ್ಲಿದ್ದು, ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿದಂತೆ ಕಂಡುಬಂದಿದೆ ಎಂಬುದಾಗಿ ನೀಡಿದ ಮಾಹಿತಿಯಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ :ಬೈಕ್ ಅಪಘಾತ ಗಾಯಾಳುವಿನ ಮಿದುಳು ನಿಷ್ಕ್ರಿಯ;  ಕುಟುಂಬಸ್ಥರಿಂದ ಅಂಗಾಂಗ ದಾನ – Vishwanews24

Leave a Reply