ಉಡುಪಿ: ವಿವಾದ ಎಬ್ಬಿಸಿ ಮುಸ್ಲಿಮ್ ಮತ ಸಂಪಾದಿಸಲು ಇಂತಹ ಅಸಹ್ಯ ಹೇಳಿಕೆ : ಮಿಥುನ್ ರೈ ಗೆ ಪ್ರಮೋದ್ ಮುತಾಲಿಕ್ – Vishwanews24

Featured, ಉಡುಪಿ

ಉಡುಪಿ: ವಿವಾದ ಎಬ್ಬಿಸಿ ಮುಸ್ಲಿಮ್ ಮತ ಸಂಪಾದಿಸಲು ಇಂತಹ ಅಸಹ್ಯ ಹೇಳಿಕೆ ..

ಮಿಥುನ್ ರೈ ಹೇಳಿಕೆಯನ್ನು ಖಂಡಿಸಿದ ಪ್ರಮೋದ್ ಮುತಾಲಿಕ್

ಉಡುಪಿ: ಮಠಕ್ಕೆ ಮುಸ್ಲಿಂ ದೊರೆ ಜಾಗ ನೀಡಿದ್ದ ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಯನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಮುತಾಲಿಕ್, ಸಾವಿರಾರು ವರ್ಷಗಳಿಂದ ಶ್ರೀಕೃಷ್ಣಮಠದಲ್ಲಿ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತವೆ. ಆದರೆ
ವಿವಾದ ಎಬ್ಬಿಸಿ ಮುಸ್ಲಿಮ್ ಮತ ಸಂಪಾದಿಸಲು ಇಂತಹ ಅಸಹ್ಯ ಹೇಳಿಕೆ ನೀಡಲಾಗಿದೆ. ಇಂತಹ ಅಸಹ್ಯ ಕೃತ್ಯವನ್ನು ಮಾಡಿರುವ ಮಿಥುನ್ ರೈ ಅವರ
ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಮಠದ ಕುರಿತು ನೀವು ನೀಡಿದ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಕೇವಲ ಮುಸ್ಲಿಂ ಮತಗಳಿಗಾಗಿ ನೀವು ಈ ಕೃತ್ಯ ಮಾಡಿದ್ದರೆ ಕೃಷ್ಣಭಕ್ತರು ಮತ್ತು ಹಿಂದೂಗಳು ನಿಮಗೆ ಮತ ಹಾಕುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇದು ಯಾಕೆ ಬೇಕಿತ್ತು? ಇದರ ಅವಶ್ಯಕತೆ ಇರಲಿಲ್ಲ. ಇಂತಹ ಹೇಳಿಕೆಗಳ ಮೂಲಕವೇ ಇಂದು ನಿಮ್ಮ ಸ್ಥಿತಿ ದೇಶದಲ್ಲಿ ಹೇಗಿದೆ ಅಂತ ಅವಲೋಕನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ : ಸಚಿವ ಬಿ.ಸಿ.‌ನಾಗೇಶ್ – Vishwanews24

Leave a Reply