ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ-ಹರಿಪ್ರಿಯಾ ದಂಪತಿ – Vishwanews24
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ-ಹರಿಪ್ರಿಯಾ
ಉಡುಪಿ: ಸ್ಯಾಂಡಲ್ವುಡ್ನ ನಟ ವಸಿಷ್ಠ ಸಿಂಹ ಹಾಗೂ ಅವರ ಪತ್ನಿ ಹರಿಪ್ರಿಯಾ ಖುಷಿ-ಖುಷಿಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಒಟ್ಟಾಗಿ ಹಲವು ಕಡೆಗಳಿಗೆ ತೆರಳಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿ ಮೊದಲ ಬಾರಿಗೆ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಮಾಡಿದ್ದರು. ಮಂತ್ರಾಲಯದ ಮಠಕ್ಕೆ ಆಗಮಿಸಿದ ಈ ದಂಪತಿ ಮೊದಲು ರಾಯರ ಮೂಲ ಬೃಂದಾವನದ ದರ್ಶನ ಪಡೆದರು.

ಇದೀಗ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಗುರುವಾರ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.
ಇದೇ ಸಂದರ್ಭದಲ್ಲಿ ಅವರು ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನೆಲಭೋಜನ ಹರಕೆಯನ್ನು ತೀರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಭಕ್ತಿಗೀತೆ ಗಾಯಕ ಮಧೂರು ನಾರಾಯಣ ಸರಳಾಯ ಉಪಸ್ಥಿತರಿದ್ದರು.
ಮಂಗಳೂರು: ದಾಂಡಿಯಾ ನೃತ್ಯ ಹೆಸರಲ್ಲಿ ಮದ್ಯ, ಡ್ರಗ್ಸ್ ಪಾರ್ಟಿ : ವಿಹೆಚ್ಪಿ ಗಂಭೀರ ಆರೋಪ – Vishwanews24
