ಉಡುಪಿ: ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿ , ಮೀನುಗಾರಿಕೆಗಾಗಿ ಪ್ರಾರ್ಥನೆ ನಡೆಸಿದ ಮೀನುಗಾರರು – vishwanews24

Featured, ಉಡುಪಿ

ಉಡುಪಿ: ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿ , ಮೀನುಗಾರಿಕೆಗಾಗಿ ಪ್ರಾರ್ಥನೆ ನಡೆಸಿದ ಮೀನುಗಾರರು

ಉಡುಪಿ: ಈ ವರ್ಷದ ಮೀನುಗಾರಿಕೆ ಋತು ಈಗಾಗಲೇ ಪ್ರಾರಂಭಗೊಂಡಿದೆ.ಆಗಸ್ಟ್ ಒಂದಕ್ಕೆ ಅಧಿಕೃತವಾಗಿ ಮೀನುಗಾರಿಕೆ ಪ್ರಾರಂಭಗೊಂಡಿದ್ದರೂ ಕೂಡ ಕೆಲವು ಕಾರಣಗಳಿಂದ ತಡವಾಗಿ ಮೀನುಗಾರಿಕೆ ಶುರುವಾಗಿದೆ.ಆಗಸ್ಟ್ 15ರ ನಂತರ ಮೀನುಗಾರಿಕೆ ವೇಗ ಪಡೆದುಕೊಂಡಿದ್ದು ಇದೀಗ ಮೀನು ಪ್ರಿಯರಿಗೆ ಸಾಕಷ್ಟು ಮೀನುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಮೀನುಗಾರರು ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿ ಸಮುದ್ರ ಮೀನುಗಾರಿಕೆಗಾಗಿ ಪ್ರಾರ್ಥನೆ ನಡೆಸಿದರು. ಸಮುದ್ರ ರಾಜನಿಗೆ ಸಿಯಾಳ ಅಭಿಷೇಕ ಮಾಡಿದರು.

ಮಂಗಳೂರು: ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ಕರ್ನಾಟಕದ ರಾಜ್ಯಪಾಲರಿಗೂ ಬರಬಹುದು : ಐವನ್‌ ಡಿಸೋಜ – vishwanews24

ಕೈಪುಂಜಾಲು ಮೊಗವೀರ ಮಹಾಸಭಾದ ಮೀನುಗಾರರು ಸಮುದ್ರ ಪೂಜೆಯನ್ನು ಆಯೋಜಿಸಿದ್ದರು.ಕೈಪುಂಜಾಲು ಮೊಗವೀರ ಗ್ರಾಮಸಭೆಯ ಸದಸ್ಯರು ಹಾಲು ಹಾಗೂ ಸಿಯಾಳವನ್ನು ಊರಿನ ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಸಂಗ್ರಹಿಸಿ ಶ್ರೀ ಪಾಂಡುರಂಗ ರುಕ್ಷ್ಮಿಣಿದೇವರಿಗೆ ಪ್ರಾರ್ಥನೆ ಸಲ್ಲಿಸಿ ಭಜನಾ ಸಂಕೀರ್ತನೆಯೊಂದಿಗೆ ಸಮುದ್ರಕ್ಕೆ ತೆರಳಿದರು. ಬಳಿಕ ಹೇರಳ ಮತ್ಸ ಸಂಪತ್ತನ್ನು ಕರುಣಿಸುವಂತೆ ಪ್ರಾರ್ಥಿಸಿದರು.

Leave a Reply