ಉಡುಪಿ : ಸರಕಾರಿ ಆಸ್ಪತ್ರೆಯ ಮುಂಭಾಗ ತ್ಯಾಜ್ಯ ತುಂಬಿದ್ದ ಡಬ್ಬಿಯಲ್ಲಿ ನವಜಾತ ಶಿಶು ಪತ್ತೆ ; ಪೌರ ಕಾರ್ಮಿಕರಿಂದ ರಕ್ಷಣೆ -Vishwanews24

Featured, ಉಡುಪಿ

ಉಡುಪಿ: ನಗರದ ಸರಕಾರಿ ಆಸ್ಪತ್ರೆಯ ಮುಂಭಾಗ ತ್ಯಾಜ್ಯದ ಡಬ್ಬಿಗೆ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಘಟನೆ ಆಗಸ್ಟ್ 10 ರ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.

 

ನಗರದ ಚಿತ್ತರಂಜನ್ ಸರ್ಕಲ್ ಬಳಿ ಇರುವ ಇರುವ ತ್ಯಾಜ್ಯದ ಡಬ್ಬಿಯಲ್ಲಿ ನವಜಾತ ಹೆಣ್ಣು ಮಗುವನ್ನು ಎಸೆದು ಹೋಗಿದ್ದಾರೆ. ಇಂದು ಬೆಳಿಗ್ಗೆ ನಗರ ಸಭೆಯ ಸ್ವಚ್ಚತಾ ಸಿಬಂದಿಗಳು ಹೊಟೇಲ್‌ನವರು ಎಸೆದ ಬಾಳೆ ಎಲೆಯ ತ್ಯಾಜ್ಯದ ಸಂಗ್ರಹಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ,

ತ್ಯಾಜ್ಯ ತುಂಬಿದ್ದ ಡಬ್ಬಿಯಲ್ಲಿ ನವಜಾತ ಶಿಶು ಅಳುವುದನ್ನು ಗಮನಿಸಿದ ಪೌರ ಕಾರ್ಮಿಕರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸದ್ಯ ನಗರದ ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.