ಉಡುಪಿ: ಸಾಲದ ಕಂತು ಬಾಕಿಯಿದೆ ಎಂದು ಕನ್ನಡದಲ್ಲಿ ಕರೆ ಮಾಡಿ ವಂಚಿಸಲು ಯತ್ನ – vishwanews24

Featured, ಉಡುಪಿ

ಉಡುಪಿ: ಸಾಲದ ಕಂತು ಬಾಕಿಯಿದೆ ಎಂದು ಕನ್ನಡದಲ್ಲಿ ಕರೆ ಮಾಡಿ ವಂಚಿಸಲು ಯತ್ನ

ಉಡುಪಿ: ಸಾಮಾನ್ಯವಾಗಿ ಆನ್‌ಲೈನ್ ವಂಚಕರು ಹಿಂದಿ, ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಆದ್ದರಿಂದ ಅಂತಹ ಕರೆ ಬಂದರೆ ಕನ್ನಡದಲ್ಲಿ ಉತ್ತರಿಸಿದರೆ ವಂಚನೆಯಿಂದ ಪಾರಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಆ ನಂಬಿಕೆ ಈಗ ಸುಳ್ಳಾಗಿದ್ದು, ಕಟಪಾಡಿಯ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದಾನೆ.

ಕಟಪಾಡಿಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ವಕೀಲನೆಂದು ಪರಿಚಯಿಸಿಕೊಂಡಿದ್ದಾನೆ. ಕರೆ ಮಾಡಿದ ಆತ ‘ನಿಮ್ಮ ಸಾಲದ ಕಂತು ಬಾಕಿ ಇದ್ದು, ಕೇಸ್ ಆಗಿದೆ. ಕೋರ್ಟ್ ಗೆ ಹಾಜರಾಗಬೇಕು’ ಎಂದಿದ್ದಾನೆ. ಜೊತೆಗೆ ಸಾಲದ ಕಂತನ್ನು ಗೂಗಲ್ ಪೇ ಮಾಡುವಂತೆ ಒತ್ತಡ ಹಾಕಿದ್ದಾನೆ. ಕರೆ ಬಂದಿರುವ ನಂಬರ್ 8792701216 ಆಗಿದ್ದು ಟ್ರೂ ಕಾಲರ್‌ನಲ್ಲಿ ನಾಗ ಆರ್. ಎಂದು ಹೆಸರು ತೋರಿಸುತ್ತಿದೆ.

ಉಡುಪಿ: ಫೈನಾನ್ಸ್ ಗೆ ಮ್ಯಾನೇಜರ್ ಮತ್ತು‌ ಲೋನ್ ಆಫೀಸರ್ ಗಳಿಂದಲೇ ವಂಚನೆ ; ಪ್ರಕರಣ ದಾಖಲು – vishwanews24

ಬಳಿಕ ಆ ವ್ಯಕ್ತಿಯು ‘ಏ ಚಂದ್ರ ಕೂಡಲೇ ಕೋರ್ಟ್ ಗೆ ಬಾ. ಎಷ್ಟು ಹೊತ್ತಿನಲ್ಲಿ ಬರುತ್ತೀ..’ ಎಂದು ಪ್ರಶ್ನಿಸಿದ್ದು, ನಂತರ ಸಾಲ ನೀಡಿದ ಮ್ಯಾನೇಜರ್ ಅವರೊಂದಿಗೂ ಮಾತನಾಡುವಂತೆ ಹೇಳಿ ಇನ್ನೊಬ್ಬನಿಗೆ ಮೊಬೈಲ್ ಹಸ್ತಾಂತರಿದ್ದಾನೆ. ನಂತರ ಮ್ಯಾನೇಜರ್ ಎಂಬ ವ್ಯಕ್ತಿ ಮಾತನಾಡಿ, ತಾಂತ್ರಿಕ ಸಮಸ್ಯೆ ಇರುವುದರಿಂದ ಸಾಲದ ಕಂತು ಅಟೋ ಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ ಪಾವತಿ ಆಗುತ್ತಿಲ್ಲ. ಕೂಡಲೇ ಗೂಗಲ್ ಪೇ ಮೂಲಕ ಪಾವತಿ ಮಾಡಿ’ ಎಂದು ಆತನೂ ಒತ್ತಡ ಹೇರಿದ್ದಾನೆ.

ಇದು ವಂಚಕರ ಕರೆಯೆಂದು ಅರಿತ ಚಂದ್ರ ಪೂಜಾರಿ ಅವರು, ನನ್ನ ಸಾಲದ ಕಂತು ಬಾಕಿ ಇಲ್ಲ. ಹಾಗೂ ಬಾಕಿ ಇದ್ದಲ್ಲಿ ಕಚೇರಿಗೇ ಬಂದು ಪಾವತಿಸುತ್ತೇನೆ. ನಿಮ್ಮ ಕಚೇರಿ ಉಡುಪಿಯಲ್ಲಿ ಎಲ್ಲಿದೆ?’ ಎಂದು ಕೇಳಿದಾಗ ತಡವರಿಸಿದ ವ್ಯಕ್ತಿಯು ಲೊಕೇಷನ್ ಕಳಿಸುತ್ತೇನೆ’ ಎಂದು ಹೇಳಿ ಕರೆ ಕಡಿತ ಮಾಡಿದ್ದಾನೆ. ನಂತರ ಚಂದ್ರು ತನ್ನ ವಾಹನಕ್ಕೆ ಸಾಲ ನೀಡಿದ ಕಂಪನಿಗೆ ಕರೆ ಮಾಡಿ ವಿಚಾರಿಸಿದಾಗ, ತಮ್ಮ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ ಮತ್ತು ಅವರ ಸಾಲದ ಯಾವುದೇ ಕಂತು ಬಾಕಿ ಉಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಡುಪಿ: ಸಬ್ ಜೈಲ್ ಆಗಿದ್ದ ಹಳೆ ತಾಲೂಕು ಕಚೇರಿ ಕಟ್ಟಡ ನೆಲಸಮ: 45 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ನೂತನ ನಗರಸಭೆ ಕಟ್ಟಡ – vishwanews24

Leave a Reply