ಉಡುಪಿ : ಸೀತಾನದಿ ಹೊಳಗೆ ಬಿದ್ದು ಇಬ್ಬರು ಯುವಕರ ಸಾವು – Vishwanews24

Featured, ಉಡುಪಿ

ಉಡುಪಿ : ಸೀತಾನದಿ ಹೊಳಗೆ ಬಿದ್ದು ಇಬ್ಬರು ಯುವಕರ ಸಾವು

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿ ಹೊಳಗೆ ಬಿದ್ದು ಇಬ್ಬರು ಯುವಕರು ಸಾವನಪ್ಪಿದ ಘಟನೆ ಭಾನುವಾರ ಸಂಜೆ  ಸಂಭವಿಸಿದೆ.

ಶಿವಮೊಗ್ಗ ಮೂಲದ ಶೃಂಗೇರಿ ಯಲ್ಲಿ ವೈದ್ಯರಾಗಿರುವ ಡಾ| ದೀಪಕ್‌(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡೇನಿಯಲ್‌ (40) ಮೃತಪಟ್ಟವರು.

ಸಿನು ಡ್ಯಾನಿಯಲ್‌ ಅವರು ತನ್ನ ವೈದ್ಯ ಮಿತ್ರ ಡಾ| ವಿನ್ಸೆಂಟ್‌ ಎಂ.ಸಿ. ಮೋಹನ್‌ ಜತೆಗೆ ಶಿವಮೊಗ್ಗದಿಂದ ಹೆಬ್ರಿಗೆ ಬಂದು ಮಣಿಪಾಲ ದಿಂದ ಬಂದ ವೈದ್ಯ ದೀಪಕ್‌ ಅವರೊಂದಿಗೆ ಹೆಬ್ರಿಯಲ್ಲಿ ಜತೆಯಾಗಿ ಊಟ ಮಾಡಿ ಸೋಮೇಶ್ವರ ಕಡೆ ಹೋಗುವಾಗ ಸೀತಾನದಿಯಲ್ಲಿ ಸ್ನಾನಕ್ಕಿಳಿದರು. ಸಿನು ಡ್ಯಾನಿಯಲ್‌ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು,ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದರು. ಇದನ್ನು ಗಮನಿಸಿದ ದೀಪಕ್‌ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು ಇಬ್ಬರೂ ಮುಳುಗಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಗುವ ಪೂರ್ಣ ವಿಶ್ವಾಸ ಇದೆ : ಸತ್ಯಜಿತ್ ಸುರತ್ಕಲ್ – Vishwanews24

ಡಾ| ವಿನ್ಸೆಂಟ್‌ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದರೂ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗದೆ ಮರದ ಬೇರನ್ನು ಹಿಡಿದು ಮೇಲೆ ಬಂದರು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply