ಉಡುಪಿ : ಸ್ಕಾರ್ಫ್ ಧರಿಸಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಬೇಕು : ಅಮೃತ್‌ ಶೆಣೈ – Vishwanews24

Featured, ಉಡುಪಿ

ಉಡುಪಿ : ಸ್ಕಾರ್ಫ್ ಧರಿಸಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಬೇಕು : ಅಮೃತ್‌ ಶೆಣೈ – Vishwanews24

ಉಡುಪಿ: ಸ್ಕಾರ್ಫ್ ಧರಿಸಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಬೇಕು ಎಂದು ಸರಕಾರದ ಬಳಿ ಬೇಡಿಕೆ ಇಟ್ಟು ಶಾಸಕರಿಗೆ ಮಂತ್ರಿಗಳಿಗೆ ಒತ್ತಡ ಹಾಕುವುದು ಸೂಕ್ತ ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದು ಒಳಿತು ಎಂಬ ಅಭಿಪ್ರಾಯವನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ಸಹಬಾಳ್ವೆ ತಂಡದ ಅಧ್ಯಕ್ಷನ ನೆಲೆಯಲ್ಲಿ‌ ನೀಡಿದ್ದೇನೆ ಎಂದು ಸಹಬಾಳ್ವೆ ಉಡುಪಿ ‌ತಂಡದ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.

ಉಡುಪಿ ಶಾಸಕ‌ ರಘು‌ಪತಿ ಭಟ್ ರಿಗೂ‌ ಭೇಟಿ‌ ಆಗಿ ಈ ಮನವಿ ಮಾಡಿದ್ದೇವೆ ,ಅವರು ಸರಕಾರಕ್ಕೆ ಬರೆಯತ್ತೇನೆ ಹಾಗೂ ಸಂಬಂಧ ಪಟ್ಟ ಸಚಿವರ ಅಭಿಪ್ರಾಯ ಪಡೆಯುತ್ತೇನೆ ಸದ್ಯಕ್ಕೆ ಇದನ್ನು ಒಪ್ಪಿದರೆ ,ಅನ್ಯ ಸಂಘಟನೆಗಳು ಹೊಸ ಹೊಸ‌ಬೇಡಿಕೆಯೊಂದಿಗೆ ಬಂದು‌ ಘರ್ಷಣೆಯ ವಾತಾವರಣ ಉಂಟಾದರೆ ಉಡುಪಿಯ ಶಾಂತಿ ಕದಡುವುದು ಎಂಬ ಭಯವನ್ನೂ ವ್ಯಕ್ತ ಪಡಿಸಿದ್ದಾರೆ.

ಮಂಗಳೂರು: ನೇತ್ರಾವತಿ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ಗಾಯಗೊಂಡ ಸವಾರ ಸಾವು – Vishwanews24

ಈ‌ ವಿದ್ಯಾರ್ಥಿನಿಯರ ಅಕೆಡೆಮಿಕ್ ಕರಿಯರ್ ಹಾಳಾಗಬಾರದು, ಈ ವಿಚಾರದ ಬೇಡಿಕೆ ಯನ್ನು ದೊಡ್ಡ ಮಟ್ಟದಲ್ಲಿ ಸಂಬಂಧ ಪಟ್ಟವರ‌‌ ಬಳಿ ಸಂಬಂಧ‌ಪಟ್ಟವರ ಮುಖೇನ ಇಟ್ಟು ಮನವರಿಕೆ ಮಾಡಬೇಕು ವಿನಹ ,ಈ ರೀತಿ ತರಗತಿ ಬಹಿಷ್ಕಾರ ಮಾಡಿದರೆ ಇದು ಒಂದು ಐಸೋಲೇಟೆಡ್ ಮ್ಯಾಟರ್ ಆಗಿಬಿಡುತ್ತದೆ ಎಂದು‌ ಮನವರಿಕೆ ಮಾಡಿದಾಗ ಕೊನೆಗೆ ವಿದ್ಯಾರ್ಥಿನಿಯರು ಸಮವಸ್ತ್ರದ‌ ಭಾಗವಾದ ಶಾಲನ್ನೇ ಇತರ ಹುಡುಗಿಯರು ಹೆಗಲಿಗೆ ಹಾಕಿದರೆ ನಾವು ತಲೆಗೆ ಮಾತ್ರ ಹಾಕುತ್ತೇವೆ ,ಮುಖ ತೋರಿಸುತ್ತೇವೆ ಪರವಾಗಿಲ್ಲ ನಮ್ಮ ಧಾರ್ಮಿಕ ಆಚರಣೆಗೆ ಅವಕಾಶ ನೀಡಿ ಎಂಬ ಬೇಡಿಕೆ ಯನ್ನು‌ ಇಟ್ಟಿದ್ದು ಅದನ್ನೂ ಸರಕಾರಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಖೇನ ನೀಡಲಾಗಿದೆ ,ಅದಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ ‌, ವಿದ್ಯಾರ್ಥಿನಿಯರು ಹಟ ಹಿಡಿದು ತರಗತಿ ಬಹಿಷ್ಕಾರ ಮಾಡಿ ತಿಂಗಳಾಗುತ್ತಾ ಬಂತು, ಉಡುಪಿಯಲ್ಲಿ‌‌ ಇದೊಂದು ಅನಪೇಕ್ಷಿತ ವಿವಾದ , ಈಗಾಗಲೇ ರಾಜ್ಯ ರಾಷ್ಟ್ರೀಯ ‌ಮಾಧ್ಯಮದಲ್ಲಿ ಪ್ರಕಟ ಆಗುತ್ತಿರುವ ಈ ಸುಧ್ದಿ ಬಗ್ಗೆ ಒಂದಿಷ್ಟು ತನಗೆ ತಿಳಿದ ಸತ್ಯಾಂಶ ತಮಗೆಲ್ಲರಿಗೂ ತಿಳಿಯಲಿ ಎಂದು ಅಮೃತ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ್ಕಿ : ಕೋವಿಡ್ -19 : ಐಕಳಬಾವ ಕಾಂತಾಬಾರೆ -ಬೂದಾಬಾರೆ ಜೋಡು ಕರೆ ಕಂಬಳ ದಿನಾಂಕ ಮುಂದೂಡಿಕೆ – Vishwanews24

 

Leave a Reply