ಉಡುಪಿ: ಹಾಡಹಗಲೇ ಯುವತಿಗೆ ಇರಿದು ತನ್ನ ಕುತ್ತಿಗೆಯನ್ನು ಸೀಳಿಕೊಂಡ ಯುವಕ : ಇಬ್ಬರು ಗಂಭೀರ -Vishwanews24

Featured, ಉಡುಪಿ

ಉಡುಪಿ: ಹಾಡಹಗಲೇ ಯುವತಿಗೆ ಇರಿದು ತನ್ನ ಕುತ್ತಿಗೆಯನ್ನು ಸೀಳಿಕೊಂಡ ಯುವಕ : ಇಬ್ಬರು ಗಂಭೀರ -Vishwanews24

ಉಡುಪಿ : ಸಂತೆಕಟ್ಟೆಯ ಪೆಟ್ರೊಲ್ ಬಂಕ್ ಬಳಿ ಹಾಡಹಗಲೇ ಯುವಕನೊಬ್ಬ ಯುವತಿಯ ಕುತ್ತಿಗೆ ಸೀಳಿ ಬಳಿಕ ತನ್ನ ಕುತ್ತಿಗೆಯನ್ನು ಸೀಳಿಕೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಯುವತಿಯು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಯುವಕನು ಆಕೆಯ ಕುತ್ತಿಗೆ ಸೀಳಿದ್ದು, ಬಳಿಕ ತನ್ನ ಕುತ್ತಿಗೆಯನ್ನು ಸೀಳಿಕೊಂಡಿದ್ದು ಇಬ್ಬರೂ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹುಡುಗಿ ಅಂಬಾಗಿಲು ಮೂಲದವರೆಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಹುಡುಗನೇ ಚೂರಿ ಇರಿದ ಕುರಿತು ಮಾಹಿತಿ ಲಭ್ಯವಾಗಿದ್ದು, ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಮೊದಲಿಗೆ ಯುವಕ ಇರಿದು ತದನಂತರ ಸ್ವತಃ ತಾನು ಕೂಡಾ ಚೂರಿ ಇರಿದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಈ ಇಬ್ಬರೂ ಸ್ಥಳೀಯರೇ ಎಂದು ಹೇಳಲಾಗಿದೆ.