ಉಡುಪಿ : ಹಾಡುಹಗಲೇ ಕಳ್ಳತನ – ಚಿನ್ನದ ಸರ ಕಿತ್ತು ಪರಾರಿ :ಪ್ರಕರಣ ದಾಖಲು – vishwanews24
ಉಡುಪಿ : ಹಾಡುಹಗಲೇ ಕಳ್ಳತನ – ಚಿನ್ನದ ಸರವನ್ನು ಕಿತ್ತು ಪರಾರಿ : ಪ್ರಕರಣ ದಾಖಲು
ಉಡುಪಿ : ನಗರದ ಶಿವಳ್ಳಿ ಗ್ರಾಮದಲ್ಲಿ ಹಾಡುಹಗಲೇ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 3ರಂದು ನಡೆದಿದೆ.
ದೂರುದಾರರಾದ ಕಮಲಾ (70) ಉಡುಪಿಯ ಶಿವಳ್ಳಿ ಗ್ರಾಮದವರು. ಅವರು ಶಿವಳ್ಳಿ ಗ್ರಾಮದ ಸಗ್ರಿನೋಲ್ ರಸ್ತೆಯಲ್ಲಿರುವ ತಿರುಮಲ ಪೌಲ್ಟ್ರಿ ಫಾರಂ ಬಳಿಯ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ ಕಳ್ಳತನ ನಡೆದಿದೆ.
ದೂರಿನ ಪ್ರಕಾರ, ಪೆರಂಪಳ್ಳಿ ಕಡೆಯಿಂದ ಬಂದ ಅಪರಿಚಿತ ವ್ಯಕ್ತಿ ಕಮಲಾ ಅವರ ಹಿಂದಿನಿಂದ ಬಂದು ಆಕೆಯ ಕತ್ತಿನಲ್ಲಿದ್ದ 16 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
