ಕುಂದಾಪುರ ಹಿಜಬ್ ವಿವಾದ : ಕಾಲೇಜಿನಲ್ಲಿ ಪ್ರತಿಭಟಿಸಿದರೆ ಎಫ್ಐಆರ್ – ಪೋಷಕರಿಗೆ ಎಚ್ಚರಿಕೆ – Vishwanews24
ಹಿಜಬ್ ವಿವಾದ : ಕಾಲೇಜಿನಲ್ಲಿ ಪ್ರತಿಭಟಿಸಿದರೆ ಎಫ್ಐಆರ್ – ಪೋಷಕರಿಗೆ ಎಚ್ಚರಿಕೆ – Vishwanews24
ಉಡುಪಿ: ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿಜಬ್ ವಿವಾದ ತಾರಕಕ್ಕೇರಿದೆ. ನಿನ್ನೆ ಗೇಟಿನ ಹೊರಗೆ ನಿಲ್ಲಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಮೈದಾನದವರೆಗೆ ಆಡಳಿತ ಮಂಡಳಿ ಬಿಟ್ಟುಕೊಂಡಿದೆ.
ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡುವಂತೆ ಪ್ರಾಂಶುಪಾಲರಿಗೆ ಹಿಜಬ್ ವಿದ್ಯಾರ್ಥಿನೀಯರು ಒತ್ತಾಯ ಮಾಡಿದ್ದಾರೆ. ಸರ್ಕಾರದ ಆದೇಶ ಏನು ಎಂಬುದನ್ನು ಕಾಲೇಜಿನ ಮಹಿಳಾ ಉಪನ್ಯಾಸಕರು ವಿದ್ಯಾರ್ಥಿನಿಯರಿಗೆ ಮನದಟ್ಟು ಮಾಡಲು ಯತ್ನಿಸಿದರು.
ಇವತ್ತು ವಿದ್ಯಾರ್ಥಿನಿಯರು ಪೋಷಕರನ್ನು ಕಾಲೇಜಿಗೆ ಕರೆದುಕೊಂಡು ಬಂದಿದ್ದಾರೆ. ಪೋಷಕರಿಗೆ ಕಾಲೇಜಿನ ಕಂಪೌಂಡ್ ಒಳಗೆ ಪ್ರವೇಶಾವಕಾಶವನ್ನು ಕೊಟ್ಟಿಲ್ಲ. ಪ್ರಾಂಶುಪಾಲರು ಕಾಲೇಜಿನ ಗೇಟಿಗೆ ಬೀಗ ಹಾಕಿ ಪೋಷಕರನ್ನು ಹೊರಗೆ ನಿಲ್ಲಿಸಿದ್ದಾರೆ.
ಪೋಷಕರು, ಉಪನ್ಯಾಸಕರು, ವಿದ್ಯಾರ್ಥಿಗಳ ವಾಗ್ವಾದಗಳು ನಡೆಯುತ್ತಿದ್ದಂತೆ, ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ನಡೆಸಿದರೆ ಎಫ್ಐಆರ್ ದಾಖಲಿಸುವ ಎಚ್ಚರಿಕೆ ನೀಡಿದರು. ಹೊರಗಡೆ ಈ ಗಲಾಟೆಗಳು ನಡೆಯುತ್ತಿದ್ದರೆ ತರಗತಿಗಳಲ್ಲಿ ಎಂದಿನಂತೆ ಪಾಠ ನಡೆಯುತ್ತಿವೆ.
ಇದನ್ನೂ ಓದಿ :
ಹಿಜಬ್ ಧರಿಸುವುದು ಮೂಲಭೂತ ಹಕ್ಕು, ಅದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ : ಸಿದ್ದರಾಮಯ್ಯ – Vishwanews24
