ಉಡುಪಿ ಹಿಜಾಬ್ ವಿವಾದ : ನ್ಯಾಯಾಲಯದ ಆದೇಶ ವಿರೋಧಿಸಲು ಕಾಂಗ್ರೆಸ್ ಪ್ರೇರೇಪಣೆ ಕೊಡುತ್ತಿದೆ: ಸಚಿವ ಕೋಟ – Vishwanews24
ಉಡುಪಿ ಹಿಜಾಬ್ ವಿವಾದ : ನ್ಯಾಯಾಲಯದ ಆದೇಶ ವಿರೋಧಿಸಲು ಕಾಂಗ್ರೆಸ್ ಪ್ರೇರೇಪಣೆ ಕೊಡುತ್ತಿದೆ: ಸಚಿವ ಕೋಟ – Vishwanews24
ಉಡುಪಿ: ಮುಸ್ಲಿಂ ಮಹಿಳೆಯರು ಸಹೋದರಿಯರು ಎಂಬ ಭಾವನೆಯಿಂದ ತ್ರಿವಳಿ ತಲಾಕ್ ರದ್ದು ಮಾಡಲಾಯ್ತು. ಹಿಜಾಬ್ ಹೋರಾಟ ಮಾಡುತ್ತಿರುವವರು ಅರ್ಥಮಾಡಿಕೊಳ್ಳಬೇಕು. ವರ್ಗ ಸಂಘರ್ಷಕ್ಕೆ ಪ್ರೇರಣೆ ಕೊಡುವವರ ಮಾತು ಕೇಳಬೇಡಿ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವರು ,ವೋಟಿಗಾಗಿ, ಧರ್ಮಕ್ಕಾಗಿ ಪ್ರೇರೇಪಣೆ ಕೊಡುವವರ ಬಗ್ಗೆ ಕಿವಿಗೊಡಬೇಡಿ.ಧರ್ಮಾಂಧತೆಗೆ ಉತ್ತೇಜನ ಕೊಡುವ ಪ್ರಕ್ರಿಯೆ ನಿಲ್ಲಬೇಕು.ಸಮವಸ್ತ್ರ ಅಂದರೆ ಸಮಾನತೆಯ ಸಂಕೇತ.ಬುರ್ಖಾ ಮತ್ತು ಹಿಜಾಬ್ ನ ಸಂವಿಧಾನಾತ್ಮಕ ವಿಚಾರವನ್ನು ಯಾರೂ ಪ್ರಶ್ನೆ ಮಾಡಿಲ್ಲ. ಕಾನೂನನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು.
ನ್ಯಾಯಾಲಯದ ಆದೇಶ ವಿರೋಧಿಸಲು ಕಾಂಗ್ರೆಸ್ ಪ್ರೇರೇಪಣೆ ಕೊಡುತ್ತಿದೆ. ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ಸಂಘಟನೆಗಳ ಕುಮ್ಮಕ್ಕಿಗೆ ಅವಕಾಶ ಕೊಡಬಾರದು ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಪುಷ್ಪಾ ಸಿನಿಮಾಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ – Vishwanews24
