ಉಡುಪಿ ಹಿಜಾಬ್ ವಿವಾದ : ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹತ್ತು ದಿನದ ಬಳಿಕ ಎಂಜಿಎಂ ಕಾಲೇಜು ಆರಂಭ – VIshwanews24
ಉಡುಪಿ ಹಿಜಾಬ್ ವಿವಾದ : ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹತ್ತು ದಿನದ ಬಳಿಕ ಎಂಜಿಎಂ ಕಾಲೇಜು ಆರಂಭ – VIshwanews24
ಉಡುಪಿ : ಜಿಜಾಬ್ ಮತ್ತು ಕೇಸರಿ ಶಾಲು ವಿವಾದದಿಂದ ಮುಚ್ಚಿದ್ದ ಎಂಜಿಎಂ ಕಾಲೇಜು ಇದೀಗ ಹತ್ತು ದಿನದ ಬಳಿಕ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆರಂಭವಾಗಿದೆ.
ಫೆ.8ರಂದು ಎಂಜಿಎಂ ಕಾಲೇಜು ಕ್ಯಾಂಪಸ್ನಲ್ಲಿ ಜಿಜಾಬ್ ಮತ್ತು ಕೇಸರಿ ಶಾಲು ವಿವಾದ ವಿಪರೀತವಾಗಿದ್ದು, ಅಂದಿನಿಂದ ಮುಚ್ಚಿದ ಕಾಲೇಜು ಇದೀಗ ಇಂದಿನಿಂದ ಓಪನ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇನ್ನು ಇಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಿದ್ದು, ದ್ವಿತೀಯ ಪಿಯುಸಿ ಕೆಮೆಸ್ಟ್ರಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಎಕ್ಸಾಮ್ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಅಪರ ಪೋಲಿಸ್ ವರಿಷ್ಟಾಧಿಕಾರಿ ಸಿದ್ದಲಿಂಗಯ್ಯ, ಎಲ್ಲೆಡೆ ಶಾಂತಿಯುತವಾಗಿದ್ದು, ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಎಂಜಿಎಂ ಕಾಲೇಜಿನಲ್ಲಿ ಕೂಡಾ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದು ಯಾವುದೇ ರೀತಿಯ ಆತಂಕ ಇಲ್ಲ ಎಂದಿದ್ದಾರೆ.
ಇನ್ನು ಇಂದಿನಿಂದ ಕಾಲೇಜು ಆರಂಭವಾಗುವ ಹಿನ್ನಲೆ ಹೆಚ್ಚುವರಿ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಿದ್ದು, ಶಾಲಾ ಆಡಳಿತ ಮಂಡಳಿಯವರು ಸಮವಸ್ತ್ರ ನಿರ್ಧಾರ ಮಾಡಿದ್ದಾರೆ. ಬಂದಿರುವ ವಿದ್ಯಾರ್ಥಿಗಳನ್ನು ಕಾಲೇಜು ಆವರಣದೊಳಗೆ ಪ್ರವೇಶ ನೀಡಲಾಗುತ್ತಿದೆ. ಕಾಪುವಿನಲ್ಲಿ ಕೂಡಾ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಕೇರಳದಿಂದ ಕರ್ನಾಟಕಕ್ಕೆ ಬರಲು ಆರ್ಟಿಪಿಸಿಆರ್ ಟೆಸ್ಟ್ ವರದಿ ಬೇಕಾಗಿಲ್ಲ – Vishwanews24
