ಉಡುಪಿ: ಹೆಚ್ಚುವರಿ ಟೋಲ್ ದರ ವಿರೋಧಿಸಿ ಮುಷ್ಕರ ಹಿಂಪಡೆದ ಕೆನರಾ ಬಸ್ ಮಾಲಕರ ಸಂಘ – vishwanews24
ಉಡುಪಿ: ಹೆಚ್ಚುವರಿ ಟೋಲ್ ದರ ವಿರೋಧಿಸಿ ಮುಷ್ಕರ ಹಿಂಪಡೆದ ಕೆನರಾ ಬಸ್ ಮಾಲಕರ ಸಂಘ
ಉಡುಪಿ : ಟೋಲ್ ಗೇಟ್ ಕೇಂದ್ರದಲ್ಲಿ ಖಾಸಗಿ ಬಸ್ ಗಳ ಮೇಲೆ ಹೆಚ್ಚುವರಿ ಟೋಲ್ ದರ ವಿಧಿಸುತ್ತಿರುವ ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಕೇಂದ್ರಗಳ ವಿರುದ್ಧ ಆಗಸ್ಟ್ 23ರಂದು ಕೈಗೊಳ್ಳಲು ಉದ್ದೇಶಿಸಿದ್ದ ಮೌನ ಪ್ರತಿಭಟನೆಯನ್ನು ಕೆನರಾ ಬಸ್ ಮಾಲಕರ ಸಂಘವು ಹಿಂಪಡೆದಿದೆ.
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ. 19ರಂದು ಸದ್ಯಕ್ಕೆ ಹೆಚ್ಚುವರಿ ಶುಲ್ಕ ವಸೂಲಾತಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿ ಸಿರುವುದಾಗಿ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ. ಒಂದು ವೇಳೆ ಮರಳಿ ವಿಧಿಸಿದರೆ ಮತ್ತೆ ಪ್ರತಿಭಟಿಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಪ್ರತಿಭಟನೆಗೆ ಮನವಿ ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಹೆದ್ದಾರಿ ಇಲಾಖೆಗೂ ಮಾಹಿತಿ ನೀಡಲಾಗಿತ್ತು.
ಐವನ್ ಡಿಸೋಜ ವಿರುದ್ಧ ಎಫ್ಐಆರ್ ದಾಖಲಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಗ್ರಹ – vishwanews24
