ಉಡುಪಿ : ಹೆದ್ದಾರಿಯಲ್ಲಿ 30 ಬ್ಲಾಕ್‌ ಸ್ಪಾಟ್‌ : ಅಪಘಾತವಾದರೆ ಅಧಿಕಾರಿಗಳೇ ಹೊಣೆ – Vishwanews24

Featured, ಉಡುಪಿ

ಉಡುಪಿಯ ಹೆದ್ದಾರಿಯಲ್ಲಿ 30 ಬ್ಲಾಕ್‌ ಸ್ಪಾಟ್‌ : ಅಪಘಾತವಾದರೆ ಅಧಿಕಾರಿಗಳೇ ಹೊಣೆ

ಉಡುಪಿ : ಜಿಲ್ಲೆಯಲ್ಲಿ 30ಕ್ಕೂ ಅಧಿಕ ಅಪಘಾತ ವಲಯ (ಬ್ಲಾಕ್‌ ಸ್ಪಾಟ್‌)ಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ, ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ತತ್‌ಕ್ಷಣದಲ್ಲಿ ತಾತ್ಕಾಲಿಕ/ಶಾಶ್ವತ ಸುರಕ್ಷೆ ಕಾರ್ಯಗಳನ್ನು ಕೈಗೊಂಡು ಸಂಭಾವ್ಯ ಅಪಘಾತಗಳನ್ನು ತಪ್ಪಿಸಬೇಕು.

ಹಾಗೆಯೇ ವಾರದೊಳಗೆ ವರದಿಯನ್ನು ಜಿಲ್ಲಾ ರಸ್ತೆ ಸುರಕ್ಷತ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಸೂಚನೆ ನೀಡಿದರು.

ಮಲ್ಪೆ : ಸಹಜ ಸ್ಥಿತಿಗೆ ಸಮುದ್ರ..ಸ್ಥಗಿತ ಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭ – Vishwanews24

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚೀಂದ್ರ ಮಾತನಾಡಿ, ರಾ.ಹೆ.ಯಲ್ಲಿ ಈ ಹಿಂದೆಯೇ ಅಪಘಾತ ವಲಯ ಸ್ಥಳಗಳನ್ನು ಗುರುತಿಸಿ, ಅಗತ್ಯ ವೈಜ್ಞಾನಿಕ ಕಾರ್ಯಗಳನ್ನು ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿ ಆಗದೇ ಇರುವ ಬಗ್ಗೆ ಸಮಿತಿಯ ಗಮನಕ್ಕೆ ತಂದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಸ್ಥಳದಲ್ಲಿ ಅಪಘಾತಗಳು ಸಂಭವಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಪರಾಧಿಗಳನ್ನಾಗಿಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ರಸ್ತೆ ನಿಯಮಗಳ ಉಲ್ಲಂಘನೆಯ 42,944 ಪ್ರಕರಣಗಳಲ್ಲಿ 1.96 ಕೋ.ರೂ.ಗಳಿಗೂ ಹೆಚ್ಚು ದಂಡ ಸಂಗ್ರಹಿಸಲಾಗಿದೆ ಎಂದರು.

ವಾದ ವಿವಾದಗಳಿಂದ ದೂರವಿರಿ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

Leave a Reply