ಉಡುಪಿ: ಹೋಟೆಲ್‌ನಲ್ಲಿ ಅನೈತಿಕ ವೇಶ್ಯಾವಾಟಿಕೆ : ಓರ್ವ ಬಂಧನ – vishwanews24
ಉಡುಪಿ: ಹೋಟೆಲ್‌ನಲ್ಲಿ ಅನೈತಿಕ ವೇಶ್ಯಾವಾಟಿಕೆ : ಓರ್ವ ಬಂಧನ ; ಯುವತಿಯ ರಕ್ಷಣೆ
ಉಡುಪಿ: ನಗರದ ಹೊಟೇಲ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿಯಂತೆ ಉಡುಪಿ ಸರ್ಕಲ್ ಇನ್ಸೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ ಓರ್ವ ಬ್ರೇಕರ್ ಬಂಧಿಸಿದ್ದು ಹಾಗೂ ಸಂತ್ರಸ್ತ ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ಪೊಲೀಸ್ ನಿರೀಕ್ಷಕ ಮಂಜುನಾಥ ಬಡಿಗೇರ್ ಹೋಟೆಲ್‌ನಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಮಾಹಿತಿಯಂತೆ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಮ್ಮರ್ ಪಾರ್ಕ್ ಹೋಟೆಲ್‌ನ ಸ್ವಾಗತಕಾರ ಶ್ರೀನಿವಾಸ ರವರೊಂದಿಗೆ 2ನೇ ಮಹಡಿಯಲ್ಲಿರುವ ರೂಮ್ ನಂಬ್ರ 308 ಕ್ಕೆ ದಾಳಿ ನಡೆಸಿ ರೂಮ್ ನಲ್ಲಿ ಇದ್ದ ಒಬ್ಬ ಮಹಿಳೆಯನ್ನು ವಿಚಾರಿಸಿದ್ದಾರೆ. ಆಗ ಮಹಿಳೆ ಶರತ್ @ ಮೊಹಮ್ಮದ್ ಫಯಾಜ್ ಎಂಬ ವ್ಯಕ್ತಿ ನೊಂದ ಮಹಿಳೆಯನ್ನು ಉಡುಪಿಗೆ ಕೆಲಸ ಕೊಡಿಸುವುದಾಗಿ ಆ.19 ರಂದು ಕರೆಸಿಕೊಂಡು ರೂಮ್‌ನ್ನು ಬುಕ್ ಮಾಡಿಸಿಕೊಟ್ಟು ವೇಶ್ಯಾವಾಟಿಕೆ ದಂಧೆಗೆ, ಅಕ್ರಮ ಲಾಭ ಪಡೆಯುವ ಉದ್ದೇಶ ಕರೆದುಕೊಂಡು ಬಂದಿದ್ದಾಗಿ ತಿಳಿಸಿದ್ದಾಳೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2025 ಕಲಂ: 143, 3(5) BNS, ಕಲಂ: 3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ.
ಬಾನು ಮುಷ್ತಾಕ್ ರಿಂದ ಮೈಸೂರು ದಸರಾ ಉದ್ಘಾಟನೆಗೆ ಯಶ್ಪಾಲ್ ಸುವರ್ಣ ವಿರೋಧ – vishwanews24
