ಉದ್ಯಾವರ ಸೇತುವೆಗೆ ಗುದ್ದಿದ ಸರ್ಕಾರಿ ಬಸ್,ಹಲವರಿಗೆ ಗಾಯ:vishwanews24
ಉದ್ಯವಾರ ಸೇತುವೆಗೆ ಗುದ್ದಿದ ಸರ್ಕಾರಿ ಬಸ್,ಹಲವರಿಗೆ ಗಾಯ.
ಕಾಪು: ರಾಷ್ಟ್ರೀಯ ಹೆದ್ದಾರಿ66 ಉದ್ಯಾವರ ಸೇತುವೆಗೆ ಕೆ.ಎಸ್.ಆರ್.ಟಿ.ಸಿ ಸರ್ಕಾರಿ ಬಸ್ ಗುದ್ದಿದ ಪರಿಣಾಮ ಹಲವಾರು ಪ್ರಯಾಣಿಕರಿಗೆ ಗಾಯವಾದ ಘಟನೆ ಇಂದು ನಡೆಯಿತು.
ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಗೆ ಗುದ್ದಿದೆ.
ಕಾಪು ಪೋಲಿಸ್ ಠಾಣಧಿಕಾರಿ ರಾಜಶೇಖರ ಸಾಗನೂರು ಮತ್ತು ಸಿಬ್ಬಂದಿ ವರ್ಗ ಘಟನಾಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

