ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೇಶ್ಯಾವಾಟಿಕೆ : ಪೊಲೀಸರ ದಾಳಿ ; 11 ಮಂದಿಯ ಬಂಧನ – vishwanews24

Featured, ರಾಜ್ಯ ನ್ಯೂಸ್

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೇಶ್ಯಾವಾಟಿಕೆ : ಪೊಲೀಸರ ದಾಳಿ ; 11 ಮಂದಿಯ ಬಂಧನ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೋಟ್ನೆಕಲ್–ಬ್ಯಾಗವಾಟ್ ರಸ್ತೆಯ ಕೆನಾಲ್ ಸಮೀಪದ ಹೊಲ ಪ್ರದೇಶದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ, 11 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಜಾಲದ ಕಿಂಗ್‌ಪಿನ್ ಎಂದು ಗುರುತಿಸಲಾದ ಮಾನ್ವಿ ಇಂದಿರಾನಗರ ನಿವಾಸಿ ತಾಯಪ್ಪ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 

ಉಡುಪಿ: ವಾಣಿಜ್ಯ ಮಳಿಗೆಯಲ್ಲಿ ಭೀಕರ  ಅಗ್ನಿ ಅವಘಡ; ಸುಮಾರು 2.5 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟ – vishwanews24

ಆರೋಪಿಗಳು ಕೆಲಸದ ಹುಡುಕಾಟದಲ್ಲಿದ್ದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರನ್ನು ಸಂಪರ್ಕಿಸಿ, ಹೆಚ್ಚಿನ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಳಿಕ ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ಅಕ್ರಮ ಚಟುವಟಿಕೆಯನ್ನು ಭೇದಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಂಧನೂರು ಡಿಎಸ್ಪಿ ಚಂದ್ರಶೇಖರ್ ನಾಯಕ್ ನೇತೃತ್ವ ವಹಿಸಿದ್ದರು. ಮಾನ್ವಿ ಪೊಲೀಸ್ ಠಾಣೆಯ ಪಿಐ ಸೋಮಶೇಖರ ಎಸ್. ಕೆಂಚರೆಡ್ಡಿ, ಪಿಎಸ್‌ಐ ಅಜ್ಮೀರ್, ಎಎಸ್‌ಐ ಹನುಮೇಶ್ ಹಾಗೂ ಸಿಬ್ಬಂದಿ ಹುಸೇನ್ ಸಾಬ್, ಬಸನಗೌಡ, ಸೂಗಪ್ಪ, ಚರಣ, ಪ್ರಕಾಶ್ ಸೇರಿದಂತೆ ಕ್ರೈಂ ಬ್ರಾಂಚ್ ತಂಡ ಪಾಲ್ಗೊಂಡಿತ್ತು.

ಇದನ್ನೂ ಓದಿ: 

ನಿಟ್ಟೆ ಅಪಘಾತ ಪ್ರಕರಣ : ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಮೃತ್ಯು – vishwanews24

ದಾಳಿ ವೇಳೆ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply