ಉಪಚುನಾವಣೆ : 15 ಕ್ಷೇತ್ರಗಳಲ್ಲಿ ಜೆಡಿಎಸ್ 10 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ : ಎಚ್.ಕೆ.ಕುಮಾರಸ್ವಾಮಿ -Vishwanews24
ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. 10 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಕೋರ್ ಕಮಿಟಿ ಸಭೆಗೆ ಮೊದಲಾಗಿ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಮಾನ ಎದುರಾಳಿಗಳು ಎಂದರು.
ನೆರೆ ಪರಿಹಾರ ಕಾರ್ಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ವಿಷಯ ಕಾಂಗ್ರೆಸ್ನಂತೆ ಜೆಡಿಎಸ್ನ ಚುನಾವಣಾ ವಿಷಯವೂ ಹೌದು. ಮುಖ್ಯಮಂತ್ರಿ ತಿಳಿಸಿದಂತೆ ಎರಡು ಮೂರು ದಿನಗಳಲ್ಲಿ ಕೇಂದ್ರದ ಪರಿಹಾರ ದೊರಕದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ಆರಂಭಿಸಲಾಗುವುದು ಎಂದರು.
