ಉಳ್ಳಾಲ: ಬೈಕ್ ಅಪಘಾತ :- ವೈದ್ಯಕೀಯ ವಿದ್ಯಾರ್ಥಿ ಬಲಿ – Vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ: ಬೈಕ್ ಅಪಘಾತ –  ವಿದ್ಯಾರ್ಥಿ ಬಲಿ

ಉಳ್ಳಾಲ: ಬೈಕ್ ಅಪಘಾತದಲ್ಲಿ ಇಂಟರ್ನಿ ವೈದ್ಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಸಹ ಸವಾರ ಗಾಯಗೊಂಡಿರುವ ಘಟನೆ ಅಂಬ್ಲಮೊಗರು ಗ್ರಾಮದ ಮದಕ‌ಬಳಿ ಸೋಮವಾರ(ಡಿ.12) ತಡರಾತ್ರಿ ನಡೆದಿದೆ.

ಬೆಂಗಳೂರು ಯಶವಂತಪುರ ನಿವಾಸಿ ನಿಶಾಂತ್ (22) ಮೃತಪಟ್ಟ ವೈದ್ಯ ವಿದ್ಯಾರ್ಥಿ. ಸಹ ಸವಾರ ಬೀದರ್ ನಿವಾಸಿ ಶಕೀಬ್ ಅಪಘಾತದಲ್ಲಿ ಗಾಯಗೊಂಡಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ಇಂಟರ್ನ್ ಶಿಪ್‌ ಮಾಡುತ್ತಿದ್ದರು. ಕುತ್ತಾರ್‌ ನಲ್ಲಿರುವ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದ ಇಬ್ಬರೂ ರಾತ್ರಿ ಬೈಕ್ ರೈಡ್ ತೆರಳಿದ್ದ ಸಂದರ್ಭ ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ, ಬೈಕ್ ಮೇಲಕ್ಕೆ ಹಾರಿ ಇಬ್ಬರೂ ಎಸೆಯಲ್ಪಟ್ಟು, ಸವಾರ ನಿಶಾಂತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಹೆಚ್ಚು ವಾಹನ ಸಂಚಾರವಿಲ್ಲದ ರಸ್ತೆಯಾಗಿದ್ದರಿಂದ ರಾತ್ರಿ ‌12.15 ರ ವೇಳೆಗೆ ಅಪಘಾತ ಸಂಭವಿಸಿದ್ದರೂ 12.30 ವೇಳೆ ಸ್ಥಳೀಯರ ಗಮನಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಮೃತ ಏಕೈಕ ಪುತ್ರನಾಗಿದ್ದು, ಇನ್ನೆರಡು ತಿಂಗಳಲ್ಲಿ ನಡೆಯುವ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆಯಬೇಕಿತ್ತು. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply