ಉಳ್ಳಾಲ : ಸಿಸಿ ಕ್ಯಾಮರಾ ಹಾನಿ ಪ್ರಕರಣ :- ಇಬ್ಬರು ಆರೋಪಿಗಳ ಬಂಧನ – Vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ : ಸಿಸಿ ಕ್ಯಾಮರಾ ಹಾನಿ ಪ್ರಕರಣ :- ಇಬ್ಬರು ಆರೋಪಿಗಳ ಬಂಧನ

ಉಳ್ಳಾಲ : ಅಕ್ರಮ ಮರಳುಗಾರಿಕೆ ಕಣ್ಗಾವಲಿಗೆ ಜಿಲ್ಲಾಡಳಿತ ಹಾಕಿದ್ದ ಸಿಸಿ ಕ್ಯಾಮರಾ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತುಂಬಿನಾಡ್ ಮೂಲದ ದಿಶಾಂತ್ (21) ಮತ್ತು ರಕ್ಷಿತ್ (32) ಎಂದು ಗುರುತಿಸಲಾಗಿದೆ. ಅವರು ಎರಡು ದಿನಗಳ ಹಿಂದೆ ಸೋಮೇಶ್ವರದಲ್ಲಿ ಮರಳು ಸಾಗಾಟ ಮಾಡುವ ಉದ್ದೇಶದಿಂದ ಸಿಸಿ ಕ್ಯಾಮರಾ ಕ್ಕೆ ಹಾನಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂತಾರ ಅಬ್ಬರದ ನಂತರ ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ ಶಿವದೂತೆ ಗುಳಿಗೆ ತುಳು ನಾಟಕ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ತಯಾರಿ..

ಅಕ್ರಮ ಮರಳು ಸಾಗಾಟ ತಡೆಯುವುದಕ್ಕಾಗಿ ದ.ಕ. ಜಿಲ್ಲಾಡಳಿತ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸದಂತೆ ಕಣ್ಗಾವಲಿಗೆ ಸಿಸಿ ಕ್ಯಾಮರಾ ಅಳವಡಿಸಿತ್ತು. ಕೆಲ ತಿಂಗಳ ಹಿಂದೆ ತಂಡವೊಂದು ಸೋಮೇಶ್ವರ ಬೀಚ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಲಾರಿಯಿಂದ ಢಿಕ್ಕಿ ಹೊಡೆದು ಕೆಡವಲು ಯತ್ನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು.

ಕಾಂತಾರ ಅಬ್ಬರದ ನಂತರ ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ ಶಿವದೂತೆ ಗುಳಿಗೆ ತುಳು ನಾಟಕ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ತಯಾರಿ..

Leave a Reply