ಎನ್ಆರ್ಸಿಯನ್ನು ಇಡೀ ರಾಷ್ಟ್ರದಲ್ಲಿ ಜಾರಿಗೆ ತರಲಾಗುವುದು : ಸಂಸತ್ನಲ್ಲಿ ಅಮಿತ್ ಶಾ -Vishwanews24
ಹೊಸದಿಲ್ಲಿ : ಅಸ್ಸಾಂನಲ್ಲಿ ಜಾರಿಗೆ ತಂದಿರುವ ನಾಗರಿಕರ ಪಟ್ಟಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ಆರ್ಸಿ) ಪ್ರಕ್ರಿಯೆಯನ್ನು ರಾಷ್ಟ್ರಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ. ಯಾವುದೇ ಧರ್ಮದವರು ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ಸಂಸತ್ತಿನಲ್ಲಿ ಬುಧವಾರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಪ್ರತಿಯೊಬ್ಬರನ್ನು ನಾಗರಿಕರ ಪಟ್ಟಿಗೆ ತರಲು ಇದೊಂದು ಕೇವಲ ಪ್ರಕ್ರಿಯೆಯಾಗಿದೆ. ಎನ್ಆರ್ಸಿಯನ್ನು ಇಡೀ ರಾಷ್ಟ್ರದಲ್ಲಿ ಜಾರಿಗೆ ತರಲಾಗುವುದು. ಅಸ್ಸಾಂನಲ್ಲಿ ಮತ್ತೊಮ್ಮೆ ಇದು ಜಾರಿಗೆ ಬರಲಿದೆ. ಯಾವ ಧರ್ಮದವರೂ ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂ ನಾಗರಿಕರ ಪಟ್ಟಿಯಿಂದ 19 ಲಕ್ಷ ಜನರನ್ನು ಹೊರಗಿಡಲಾಗಿತ್ತು. ಹೆಚ್ಚಿನ ಜನರು ತಾವು ದೇಶದ ನಾಗರಿಕರು ಎಂದು ಸಾಬೀತುಪಡಿಸುವ ದಾಖಲೆಯನ್ನು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
