ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಟೀಂ ಇಂಡಿಯಾ ಆಲ್ ರೌಂಡರ್  ಕೇದಾರ್ ಜಾಧವ್ – vishwanews24

Featured, ರಾಷ್ಟ್ರ ನ್ಯೂಸ್

ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಟೀಂ ಇಂಡಿಯಾ ಆಲ್ ರೌಂಡರ್  ಕೇದಾರ್ ಜಾಧವ್

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಕೇದಾರ್ ಜಾಧವ್ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮಹಾರಾಷ್ಟ್ರದ ಬ್ಯಾಟರ್ ಜಾಧವ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೊಂದುವಾಗ ಘೋಷಣೆ ಮಾಡಿದ ರೀತಿಯನ್ನು ಕೇದಾರ್ ಜಾಧವ್ ಅವರು ಅನುಸರಿಸಿದ್ದಾರೆ. ಕಿಶೋರ್ ಕುಮಾರ್ ಅವರ ಜಿಂದಗಿ ಕೆ ಸಫರ್ ಹಾಡನ್ನು ಬಳಸಿ ತನ್ನ ವೃತ್ತಿ ಜೀವನದ ಹಲವು ಫೋಟೊಗಳನ್ನು ಬಳಸಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಗೆ ಜಾಧವ್ ಅಪ್ಲೋಡ್ ಮಾಡಿದ್ದಾರೆ.

ಮಂಗಳೂರು: ‘ನಾನು ಪ್ರಚಾರದ ಹಿಂದೆ ಹೋದವನಲ್ಲ , ಪಕ್ಷದ ತೀರ್ಮಾನಕ್ಕೆ ಸಾಯುವವರೆಗೆ ಬದ್ಧ : ನಳಿನ್ ಕುಮಾರ್ ಕಟೀಲ್ – vishwanews24

“ನನ್ನ ವೃತ್ತಿಜೀವನದುದ್ದಕ್ಕೂ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. 15.00 ಗಂಟೆಯಿಂದ ನನ್ನನ್ನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಎಂದು ಪರಿಗಣಿಸಿ” ಎಂದು ಕೇದಾರ್ ಜಾಧವ್ ಪೋಸ್ಟ್‌ ನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ.

 

 

 

 

Leave a Reply