ಎಲ್ಲ ಔಷಧಿ ಅಂಗಡಿಗಳಲ್ಲಿ ಸಿಸಿಟಿವಿ ಕಡ್ಡಾಯ: ಕೇಂದ್ರ ಸರಕಾರ ಪ್ರಸ್ತಾವ – vishwanews24

Featured, ರಾಷ್ಟ್ರ ನ್ಯೂಸ್

ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ ವಿತರಣೆಗೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ಕಡ್ಡಾಯ : ಕೇಂದ್ರದ ಹೊಸ ಪ್ರಸ್ತಾವನೆ

ನವದೆಹಲಿ: ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ ವಿತರಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ. ಇದರ ಭಾಗವಾಗಿ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸುವ ಪ್ರಸ್ತಾವನೆ ಮುಂದಿಟ್ಟಿದೆ.

ಈ ಸಂಬಂಧ ಔಷಧ ನಿಯಮಗಳು, 1945ಕ್ಕೆ ತಿದ್ದುಪಡಿ ತರಲು ಸೆಪ್ಟೆಂಬರ್ 8ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ.

ದಶಕಗಳ ಹೋರಾಟಕ್ಕೆ ಐತಿಹಾಸಿಕ ಜಯ – ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ : ಸಿಎಂ ಮಹತ್ವದ ಘೋಷಣೆ – vishwanews24

ಕರಡು ನಿಯಮ ಜಾರಿಗೆ ಬಂದರೆ, ನೋಂದಾಯಿತ ವೈದ್ಯರ ಪ್ರಿಸ್ಕ್ರಿಪ್ಷನ್ ಆಧರಿಸಿ ಔಷಧ ಮಾರಾಟ ಮಾಡುವ ಪರವಾನಗಿ ಹೊಂದಿರುವ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸಿ ನಿರ್ವಹಿಸುವುದು ಕಡ್ಡಾಯವಾಗಲಿದೆ. ಔಷಧ ಮಾರಾಟದ ಪ್ರಕ್ರಿಯೆ ಸ್ಪಷ್ಟವಾಗಿ ದಾಖಲಾಗುವ ರೀತಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಬೇಕಾಗುತ್ತದೆ.

ಕನಿಷ್ಠ 3 ತಿಂಗಳು ದೃಶ್ಯ ಸಂಗ್ರಹ
ಮೆಡಿಕಲ್‌ ಸ್ಟೋರ್‌ಗಳಲ್ಲಿ ದಾಖಲಾಗುವ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳ ಕಾಲ ಸಂರಕ್ಷಿಸುವಂತೆ ಕರಡು ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ಔಷಧ ಮಾರಾಟದ ಕುರಿತು ನಂತರ ಪರಿಶೀಲನೆ ನಡೆಸಲು ಹಾಗೂ ನಿಯಮ ಉಲ್ಲಂಘನೆ ನಡೆದಿದ್ದರೆ ವಹಿವಾಟಿನ ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ.

ಮಂಗಳೂರು: ಸಚಿವ ಸಂಪುಟ ಸಭೆ ; ವಿಶೇಷ ತೆರೆದ  ಅಂಬಾರಿ ಬಸ್‌ನಲ್ಲಿ ಮುಖ್ಯಮಂತ್ರಿ, ಸಚಿವರ ಭವ್ಯ ಮೆರವಣಿಗೆ – vishwanews24

H, H1, X ಔಷಧಗಳ ಮೇಲೆ ನಿಗಾ
ಅನಧಿಕೃತವಾಗಿ H, H1 ಮತ್ತು X ವರ್ಗದ ಔಷಧಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಈ ಪ್ರಸ್ತಾವನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಹಾಗೂ ನಿಯಂತ್ರಿತ ಔಷಧಗಳ ಮಾರಾಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಪ್ರಸ್ತಾಪಿಸಲಾಗಿದೆ.

ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸುವ ಕುರಿತು ಔಷಧ ಸಲಹಾ ಸಮಿತಿ ಸೇರಿದಂತೆ ಸಂಬಂಧಿತ ತಜ್ಞ ಸಮಿತಿಗಳಲ್ಲೂ ಚರ್ಚೆ ನಡೆದಿದೆ.

ಆದರೆ, ಸದ್ಯ ಇದು ಕೇವಲ ಕರಡು ಪ್ರಸ್ತಾವನೆಯಷ್ಟೇ. ನಿಯಮ ಇನ್ನೂ ಜಾರಿಗೆ ಬಂದಿಲ್ಲ. ಕರಡು ಅಧಿಸೂಚನೆ ಕುರಿತು ಸಾರ್ವಜನಿಕರು ಹಾಗೂ ಸಂಬಂಧಿತ ವಲಯಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಅಧಿಸೂಚನೆ ಪ್ರಕಟವಾದ 30 ದಿನಗಳ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಂತಿಮ ಅಧಿಸೂಚನೆಯಲ್ಲಿ ಸರ್ಕಾರ ನಿಗದಿಪಡಿಸುವ ದಿನಾಂಕದಿಂದ ಮಾತ್ರ ಹೊಸ ನಿಯಮ ಜಾರಿಗೆ ಬರಲಿದೆ.

ಸಿದ್ದರಾಮಯ್ಯ ಅವರು ಶಕ್ತಿಶಾಲಿಯಾಗಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿರುತ್ತದೆ: ಕೆ.ಎನ್ ರಾಜಣ್ಣ – vishwanews24

Leave a Reply