ಎಷ್ಟೇ ದೊಡ್ಡ ವ್ಯಕ್ತಿ ಆದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ : ನಳಿನ್ ಕುಮಾರ್ ಕಟೀಲ್ -Vishwanews24
ಯಾದಗಿರಿ:ಪಕ್ಷದಿಂದ ನೀಡಿದ ಶೋಕಾಸ್ ನೋಟಿಸ್ ಗೆ ಉತ್ತರಿಸದ ಶಾಸಕ ಬಸನಗೌಡ ಫಾಟೀಲ್ ಯತ್ನಾಳ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಶೋಕಾಸ್ ನೋಟಿಸ್ ನೀಡಿದರೆ ಉತ್ತರ ಕೊಡುವುದು ಅವರ ಜವಾಬ್ದಾರಿಯಾಗಿರುತ್ತದೆ. ಉತ್ತರ ಕೊಡದೇ ಹೋದರೆ ಅದು ಅಹಂಕಾರವಾಗುತ್ತದೆ. ಪಕ್ಷಕ್ಕೆ ಅವರದ್ದೇ ಆದ ನೀತಿ, ಚೌಕಟ್ಟಿದೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಾರೆ.
ನಾನು ರಾಜ್ಯದ್ಯಕ್ಷ. ಆದರೆ ನನ್ನಿಂದ ತಪ್ಪು ನಡೆದರೆ ವಿವರಣೆ ಕೇಳಿದಾಗ ವಿವರಣೆ ಕೊಡೋದು ನನ್ನ ಜವಾಬ್ದಾರಿ. ವ್ಯತ್ಯಾಸ ಇದ್ದರೆ ಹಿರಿಯರ ಜೊತೆ ಮಾತಾಡೋಣ ಅದರಲ್ಲಿ ಏನು ತಪ್ಪಿದೆ. ವಿವರಣೆ ಕೇಳಿದ ಉತ್ತರ ಕೊಡೋದು ಜವಾಬ್ದಾರಿಯಾಗುತ್ತದೆ. ಉತ್ತರ ಕೊಡದೆ ಹೊದರೆ ಅದು ಅಹಂಕಾರವಾಗುತ್ತದೆ ಎಂದರು.
