ಎಸ್ಸಿಡಿಸಿಸಿ ಬ್ಯಾಂಕ್ 28.63 ಕೋಟಿ ರೂಪಾಯಿ ದಾಖಲೆಯ ಲಾಭ ಮತ್ತು ಸಾಲ ಮರುಪಾವತಿಯಲ್ಲಿ 23 ವರ್ಷಗಳಿಂದ ಶೇ.100 ಸಾಧನೆ: ಡಾ| ರಾಜೇಂದ್ರ ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2018 ರ ಮಾರ್ಚ್ 31ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ 28.63 ಕೋಟಿ ರೂಪಾಯಿ ಲಾಭ ಗಳಿಸಿದ್ದು ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಸರ್ವಕಾಲಿಕ ದಾಖಲೆಯಾಗಿದೆ.
2017ರಲ್ಲಿ ಬ್ಯಾಂಕ್ 24.07 ಕೋಟಿ ರೂ.ಲಾಭ ಗಳಿಸಿದ್ದು ಈ ಭಾರಿ ಲಾಭ ಗಳಿಕೆಯಲ್ಲಿ ಶೇ.19 ರಷ್ಟು ಏರಿಕೆಯನ್ನು ಕಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಮ್.ಎನ್ ರಾಜೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶೇ.100 ಸಾಧನೆ
23 ವರ್ಷಗಳಲ್ಲಿ ಕೃಷಿ ಸಾಲ ಶೇ 100 ರಷ್ಟು ಮರುಪಾವತಿ ಆಗುತ್ತಿದ್ದು ಇದು ರಾಷ್ಟ್ರೀಯ ದಾಖಲೆ . 2018 ಮಾರ್ಚ್ ಅಂತ್ಯಕ್ಕೆ ಅವಿಭಜಿತ ದ.ಕ ಜಿಲ್ಲೆಯ 18 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇ. 100 ಸಾಧನೆ ಮಾಡಿವೆ.960 ಸಂಘಗಳು ಸದಸ್ಯತ್ವ ಪಡೆದಿದ್ದು 139.33 ಕೋಟಿ ರೂ ಪಾಲು ಬಂಡವಾಳ ಹಾಗೂ 4844.60 ಕೋಟಿ ರೂ ದುಡಿಮೆ ಬಂಡವಾಳ ಹೊಂದಿವೆ. ಇದು ಕಳೆದ ವರ್ಷಕ್ಕಿಂತ ಸೇ.11.65 ರಷ್ಟು ಜಾಸ್ತಿಯಾಗಿದೆ.
ಪ್ರಶಸ್ತಿಗಳ ಶಿಖರ
ಬ್ಯಾಂಕಿಗೆ 19 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ,17 ಬಾರಿ ನಬಾರ್ಡ್ ಪ್ರಶಸ್ತಿ ಸತತವಾಗಿ ದೊರೆತಿದೆ. ಸತತ 2 ವರ್ಷಗಳಿಂದ ಎಫ್ಸಿಬಿಎ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಒಟ್ಟು 1,12,055 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯಕ್ತಿಕ ಅಫಘಾತ ವಿಮೆ ಒದಗಿಸಲಾಗಿದೆ.ಸಿಬಂದಿಗೆ ಪಿಂಚಣಿ ಕಾರ್ಯರೂಪಕ್ಕೆ ತಂದಿದೆ.
ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳ ಮೂಲಕ ಜಿಲ್ಲೆಯಲ್ಲಿ 94126 ರೈತರು 1115 ಕೋಟಿ ರೂ ಸಾಲ ಪಡೆದಿದ್ದಾರೆ,ರಾಜ್ಯ ಸರ್ಕಾರ ಘೋಷಿಸಿರುವ 1 ಲಕ್ಷ ರೂ.ವರೆಗಿನ ಬೆಳೆಸಾಲ ಮನ್ನಾದಡಿ ಅವಿಬಜಿತ ದ.ಕ ಜಿಲ್ಲೆಗೆ ಸರಕಾರದಿಂದ 724 ಕೋಟಿ ರೂ ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ ರೈತ ಸಾಲ ಮನ್ನಾ ಯೋಜನೆಯಡಿ 183 ಕೋಟಿ ರೂ.ಗಳು ಬಂದಿದ್ದು,193 ಕೋಟಿ ರೂ.ಬಾಕಿ ಇದೆ ಎಂದರು.
ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೆಶಕರಾದ ಬಿ.ನಿರಂಜನ್ , ಟಿ.ಜಿ. ರಾಜರಾಮ್ ಭಟ್, ಭಾಸ್ಕರ ಎಸ್ ಕೋಟ್ಯಾನ್ , ರಘುರಾಮ್ ಶೆಟ್ಟಿ, ಎಸ್.ರಾಜು ಪೂಜಾರಿ, ವಾದಿರಾಜ್ ಶೆಟ್ಟಿ ಎಮ್, ದೇವರಾಜ್ ಕೆ.ಎಸ್, ಸದಾಶಿವ ಉಳ್ಳಾಲ್, ರಾಜೇಶ್ ರಾವ್ , ಶಶಿ ಕುಮಾರ್ ರೈ, ಜಯರಾಮ್ ರೈ , ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎನ್.ರಮೇಶ್ ಶೆಟ್ಟಿ,ಸಿಇಒ ರವೀಂದ್ರ ಬಿ, ಜನರಲ್ ಮ್ಯಾನೇಜರ್ ಗೋಪಿನಾಥ್ ಭಟ್ ಪತ್ರಿಕಾಗೋಷ್ಟಿಯಲ್ಲಿದ್ದರು.
