ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕೈ ಗಡಿಯಾರ ನಿಷೇಧ..!!
ಬೆಂಗಳೂರು,: ಪರೀಕ್ಷಾ ಕೇಂದ್ರಗಳಲ್ಲಿನ ನಕಲು ತಡೆಯುವ ಉದ್ದೇಶದಿಂದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವೇಳೆ ಕೈ ಗಡಿಯಾರ ಕಟ್ಟಿಕೊಂಡು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವುದಕ್ಕೆ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಷೇಧ ಹೇರಲಾಗಿದೆ..
ಮುಂದಿನ ವರ್ಷ ನಡೆಯಲಿರುವ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಿಂದ ಈ ನಿಯಮ ಅನ್ವಯವಾಗಲಿದ್ದು, ಪರ್ಯಾಯ ಮಾರ್ಗವಾಗಿ ಪರೀಕ್ಷಾ ಕೇಂದ್ರಗಳಲ್ಲೆ ಗೋಡೆ ಗಡಿಯಾರ ಹಾಕಲು ನಿರ್ಧರಿಸಿದೆ..
ಇತ್ತೀಚಿನ ದಿನಗಳಲ್ಲಿ ಆಧುನಿಕ ಶೈಲಿಯ ಕೈಗಡಿಯಾರಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಅವುಗಳಲ್ಲಿ ಕೆಲವೊಂದರಲ್ಲಿ ರೆಕಾರ್ಡಿಂಗ್ ವ್ಯವಸ್ಥೆಯನ್ನು ಹೊಂದಿರುವ ವಾಚ್ ಗಳಿರುತ್ತವೆ. ಎಲೆಕ್ಟ್ರಾನಿಕ್ ಗಡಿಯಾರಗಳ ಮೂಲಕ ನಕಲು ಮಾಡುವುದು ಸುಲಭವಾಗಿದೆ. ಈ ವಾಚ್‌ಗಳು ಬ್ಲೂಟೂತ್‌ಗಳ ಮೂಲಕ ಸ್ಮಾರ್ಟ್ ಫೋನ್‌ಗಳಿಗೆ ಸಂಪರ್ಕ ಕಲ್ಪಿಸಿ ಸುಲಭ ರೀತಿಯಲ್ಲಿ ನಕಲು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿ ರಿಸ್ಟ್ ವಾಚ್ ಗಳಿಗೆ ನಿಷೇಧ ಹೇರಿದೆ.
ಬದಲಿಗೆ ಪರೀಕ್ಷೆ ಬರೆಯುವಂತಹ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರತಿಯೊಂದು ಕೊಠಡಿಗಳಲ್ಲೂ ಗಡಿಯಾರಗಳನ್ನು ಅಳವಡಿಸಲು ತೀರ್ಮಾನಿಸಿದೆ. ಹಾಗೂ ಪರೀಕ್ಷಾ ವೇಳಾಪಟ್ಟಿ ಅಂತಿಮವಾದ ಬಳಿಕ ಎಲ್ಲಾ ಕೇಂದ್ರಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಲು ಮಂಡಳಿ ತೀರ್ಮಾನಿಸಿದೆ.
