ಎಸ್.ಸಿ -ಎಸ್ಟಿ ಮೀಸಲಾತಿ ಹೆಚ್ಚಳ : ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಅಭಿನಂದನೆ – Vishwanews24
ಎಸ್.ಸಿ -ಎಸ್ಟಿ ಮೀಸಲಾತಿ ಹೆಚ್ಚಳ : ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಅಭಿನಂದನೆ
ಉಡುಪಿ: ರಾಜ್ಯದಲ್ಲಿ ಎಸ್ ಸಿ ಮತ್ತು ಎಸ್ ಟಿ ಜನಾಂಗದ ಮೀಸಲಾತಿ ಹೆಚ್ಚಲು ಮಾಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇವರ ನೇತೃತ್ವದಲ್ಲಿ – ಜಿಲ್ಲಾ ಬಿಜೆಪಿ ಹಾಗೂ ಎಸ್ ಸಿ- ಎಸ್ಟಿ ಮೋರ್ಚಾದ ವತಿಯಿಂದ ಸಿಎಂ ರ ಗೃಹ ಕಚೇರಿಯಲ್ಲಿ ಅಭಿನಂದಿಸಿದರು.


ಈ ಸಂಧರ್ಭದಲ್ಲಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್,ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರಬಾಬು,ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್,ಎಸ್ ಸಿ ಮೊರ್ಚಾ ಜಿಲ್ಲಾಧ್ಯಕ್ಷ ಗೋಪಾಲ್ ,ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ ನಾಯ್ಕ್, ಸುನೀತಾ ನಾಯ್ಕ್,ರವಿ ಅಮೀನ್,ಗುರು ಪ್ರಸಾದ್ ಶೆಟ್ಟಿ,ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಸೇರಿದಂತೆ, ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಇದ್ದರು.
BREAKING : ಮಳಲಿ ಮಸೀದಿ ವಿವಾದ : ನವೆಂಬರ್ 9 ಕ್ಕೆ ಆದೇಶ ಕಾಯ್ದಿರಿಸಿದ ಮಂಗಳೂರು ಕೋರ್ಟ್ – Vishwanews24
