ಏರ್ ಇಂಡಿಯಾ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರ – Vishwanews24

Featured, ರಾಷ್ಟ್ರ ನ್ಯೂಸ್

ಏರ್ ಇಂಡಿಯಾ ಟಾಟಾ ಗ್ರೂಪ್‌ಗೆ ಅಧಿಕೃತ ಹಸ್ತಾಂತರ – Vishwanews24

ನವದೆಹಲಿ : ಭಾರತದ ಪ್ರತಿಷ್ಠಿತ ಏರ್ ಇಂಡಿಯಾ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ. ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಗುರುವಾರ ಕಂಪನಿ ಅಧಿಕೃತವಾಗಿ ಟಾಟಾ ಗ್ರೂಪ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಲಾಯಿತು.

ನವದೆಹಲಿಯ ಏರ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ವಿಕ್ರಂ ದೇವ್ ದತ್ ಅವರನ್ನು ಎನ್ ಚಂದ್ರಶೇಖರ್ ಭೇಟಿ ಮಾಡಿದರು. ಇದಕ್ಕೂ ಮೊದಲ ಕೇಂದ್ರ ಸರ್ಕಾರದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಅಧಿಕೃತ ಹಸ್ತಾಂತರಕ್ಕಾಗಿ ವಿಮಾನಯಾನ ಸಂಸ್ಥೆ ತಲುಪಿದ್ದರು. ಇತ್ತೀಚೆಗಷ್ಟೇ ಅವರು ಏರ್ ಇಂಡಿಯಾದ CMD ಆಗಿ ವಿಕ್ರಮ್ ದೇವ್ ದತ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.

ಗುರುವಾರ ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಅಧಿಕೃತ ಹಸ್ತಾಂತರಕ್ಕಾಗಿ ಏರ್ ಲೈನ್ಸ್ ಹೌಸ್ ತಲುಪಿದ್ದು, ಈ ವೇಳೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಲಾಯಿತು.

ಉಡುಪಿ ಸ್ಕಾರ್ಫ್ ವಿವಾದ : ಇದರ ಹಿಂದೆ ಕ್ಯಾಂಪಸ್ ಫ್ರಂಟ್ , ಎ ಎಸ್ ಯು ಐ ಯಂತಹ ಸಂಘಟನೆಗಳ ಷಡ್ಯಂತ್ರ ಇದೆ : ರಘುಪತಿ ಭಟ್  – Vishwanews24

Leave a Reply