ಐಕಳಬಾವ ಡಾ| ದೇವಿ ಪ್ರಸಾದ್ ಶೆಟ್ಟಿಗೆ “ಸಮಾಜರತ್ನ‌” ಗೌರವ ಪ್ರಶಸ್ತಿ .

Featured, ಉಡುಪಿ

ಮಂಗಳೂರು : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಕೇರಳ ಕನ್ನಡಪರ ಸಂಘಟನೆಗಳ ಒಕ್ಕೂಟ ಇವರು ಕೊಡಮಾಡುವ ” ಸಮಾಜ ರತ್ನ ” ಪ್ರಶಸ್ತಿಯನ್ನು ಡಾ. ದೇವಿಪ್ರಸಾದ್ ಶೆಟ್ಟಿ ಇವರಿಗೆ ಘೋಷಿಸಲಾಗಿದೆ.

15.09.2019 ರ ಶನಿವಾರದಂದು ಬೆಳಿಗ್ಗೆ 10. 00ಘಂಟೆಗೆ ಕಾಸರಗೋಡಿನಲ್ಲಿ, ಕೇರಳದ ಹಬ್ಬವಾದ ಓಣಂ ಕಾರ್ಯಕ್ರಮದ ಅಂಗವಾಗಿ ನಡೆಸುವ “ಗಡಿನಾಡ ಓಣಂ ಉತ್ಸವ” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಹಲವಾರು ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಲಿದ್ದಾರೆ.

ಡಾ. ದೇವಿಪ್ರಸಾದ್ ಶೆಟ್ಟಿ ರಾಜಕೀಯ ಸಾಮಾಜಿಕ ಸಾಹಿತ್ಯ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು,  scdcc ಬ್ಯಾಂಕಿನ‌ ನಿರ್ದೇಶಕರಾಗಿಬೆಳಪು ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.