ಐಟಿ ದಾಳಿ ಹೇಗೆ ನಡೆಯುತ್ತೆ, ದಾಳಿ ನಡೆಸುವ ಮುನ್ನ ಅನುಸರಿಬೇಕಾದ ಕ್ರಮಗಳು ಯಾವುದು ಗೊತ್ತಾ ಇಲ್ಲಿದೆ ಓದಿ.

Featured, ರಾಜ್ಯ ನ್ಯೂಸ್

IT/ED RAID ಆಗುತ್ತೆ ಅಂದರೆ ಬಲವತ್ತರವಾದ ಸಾಕ್ಷ್ಯಾಧಾರ ಗಳು ಇರಲೇಬೇಕು.ನೂರಿಪ್ಪತ್ತು ನೂರಮೂವತ್ತು ಅಧಿಕಾರಿಗಳು 150 ಕಾರುಗಳಲ್ಲಿ ಸಿಬ್ಬಂದಿಯನ್ನು ತುಂಬಿಕೊಂಡು, ಏಕಕಾಲದಲ್ಲಿ 39 – ರಿಂದ – 64 ಕಡೆ ರೇಡ್ ಮಾಡಲು ಹೊರಟರೆಂದರೆ ತಿಂಗಳೇನು? ವರ್ಷಗಟ್ಟಲೇ ಪೂರ್ವಸಿದ್ಧತೆ ನಡೆದಿರುತ್ತೆ, ನಿಮ್ಮ ನೆಚ್ಚಿನ ಸ್ಟಾರ್ ನಟನ ಮೇಲೆ ಐಟಿ ದಾಳಿ ನಡೆದಿದೆ ಅಂತ ಅಸಮಾಧಾನ ಇರಬಹುದು ಆದರೆ ಅದಕ್ಕೆ ಕಾರಣ ಏನಂತ ಇಲ್ಲಿದೇ ಓದಿ…!

ರೇಡ್ ಆಗುವವನ ಅನೇಕ ವ್ಯವಹಾರ,ಅವ್ಯವಹಾರ ಕುರಿತಂತೆ ನಾನಾ ಮೂಲಗಳಿಂದ ನಾನಾ ದೂರುಗಳು ಮೊದಲೇ ಬಂದಿರುತ್ತವೆ.ಅವುಗಳ ಸತ್ಯಾಸತ್ಯತೆಗಳ ಬಗ್ಗೆ ಕೂಲಂಕುಷ ಗೋಪ್ಯ ವಿಚಾರಣೆ ತಿಂಗಳುಗಟ್ಟಲೇ ನಡೆದಿರುತ್ತೆ. ಅವುಗಳಲ್ಲಿ ಸತ್ಯಾಂಶ ಇರುವ ಸಂಗತಿಗಳು ಪಟ್ಟಿಯಾಗುತ್ತವೆ.ಇದೊಂದು ದೊಡ್ಡ ಕಸರತ್ತು.ಸಂಗ್ರಹಿಸಿರುವ ಮಾಹಿತಿ ನಿಜವೋ ಅಲ್ಲವೋ ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳುತ್ತಾರೆ. (sec 132 IT Act).

ಎಲ್ಲೆಲ್ಲಿ ರೇಡ್ ಮಾಡಬೇಕೋ ಆಯಾ ಮನೆ,ಜಾಗಗಳ ಪಕ್ಕಾ #ಚಕ್ಕುಬಂದಿ ಪಟ್ಟಿ ತಯಾರಾಗುತ್ತದೆ.ಆ ಮನೆಗೆ ರೇಡ್ ಮಾಡಲು ಎಷ್ಟು ಜನ ಅಧಿಕಾರಿ ಸಿಬ್ಬಂದಿ ನಿಯೋಜಿಸಬೇಕು ಎಂಬುದರ ಯೋಜನೆಯೂ ಸಿದ್ದವಾಗುತ್ತದೆ.

ನೆನಪಿರಲಿ : ಯಾವ ಅಧಿಕಾರಿಯ ನೇತೃತ್ವದಲ್ಲಿ ರೇಡ್ ಆಗುತ್ತದೆಯೋ,ಸ್ವತಃ ಆ ಅಧಿಕಾರಿ ಸಿಬ್ಬಂದಿಗಳಿಗೇ ತಾವು ಎಲ್ಲಿಗೆ,ಯಾರ ಮನೆಗೆ ದಾಳಿ ಇಡುತ್ತೇವೆ ಎಂಬ ವಿಷಯ ಕೊನೆಯತನಕ ತಿಳಿದಿರುವುದಿಲ್ಲ ! ಅದು ಅಷ್ಟು ಗೋಪ್ಯ

ಎಲ್ಲೆಲ್ಲಿ ರೇಡ್ ಆಗಬೇಕೋ ಆಯಾ ಜಿಲ್ಲೆಯ ಸೆಷನ್ಸ್ ನ್ಯಾಯಾಧೀಶರ ಮನೆಗೆ ಹೋಗಿ,ರೇಡ್ ನ ಗುರುತರತೆಯನ್ನು ಅವರಿಗೆ ವಿವರಿಸಿ,ದಾಖಲೆಗಳೊಂದಿಗೆ ಮನವರಿಕೆ ಮಾಡಿಸಿ ನಂತರ ಸರ್ಚ್ ವಾರಂಟನ್ನು ಪಡೆದುಕೊಳ್ಳುತ್ತಾರೆ.(ಅದೂ ನಿರ್ದಿಷ್ಟ ಅಧಿಕಾರಿಯ ಹೆಸರಿಗೆ.ಅದು ಅಲ್ಲೇ ಆಗಲೇ ತೀರ್ಮಾನವಾಗುತ್ತದೆ!)

ಜಡ್ಜರಿಗೆ ರೇಡ್ ನ ಗುರುತರತೆ ಮನವರಿಕೆಯಾದರೆ ಮಾತ್ರ ಸರ್ಚ್ ವಾರಂಟ್ ಕೊಡುತ್ತಾರೆ. ಇಲ್ಲವಾದರೆ ಮುಲಾಜಿಲ್ಲದೆ ನಿರಾಕರಿಸಿಬಿಡುತ್ತಾರೆ.

ಯಾವ ಅಧಿಕಾರಿ ರೇಡ್ ಮಾಡಲು ಹೋಗುತ್ತಾನೋ ಅವನ ಹೆಸರಿಗೆ ವಾರಂಟ್ ನೀಡಿ ಇಂತಿಷ್ಟು ಸಮಯದೊಳಗೆ ರೇಡ್ ಮುಗಿಸಬೇಕು ಎಂಬ ಷರತ್ತನ್ನೂ ವಿಧಿಸಿ ಸಹಿ ಪಡೆಯುತ್ತಾರೆ. ಅಲ್ಲಿಗೆ ರೇಡ್ ನ ಸಂಪೂರ್ಣ ಹೊಣೆಗಾರಿಕೆ ಆತನದೇ.ಹಾಗಿದ್ದಾಗ,ರೇಡ್ ಮನೆಯಲ್ಲಿ ನಡೆಯುವ ಯಾವುದೇ ಅಪದ್ಧಗಳಿಗೆ ಆತನೇ ಹೊಣೆಗಾರನಾಗುತ್ತಾನೆ. ಈವತ್ತಿದ್ದು ನಾಳೆ ನಿಕಾಲಿಯಾಗುವ ಯಾವನೋ ರಾಜಕಾರಿಣಿ ಮಾತಿಗೆ ಅಧಿಕಾರಿಗಳು ಅಡ್ಡಬೀಳುತ್ತಾರಾ ನೀವೇ ಯೋಚಿಸಿ.ಪೊಲೀಸರು ಜೂಜು ಅಡ್ಡೆಯ ಮೇಲೆ, ವೇಶ್ಯಾವಾಟಿಕೆಯ ಮೇಲೆ ಎಲ್ಲೆಂದರಲ್ಲಿ ಧಿಢೀರ್ ದಾಳಿ ನಡೆಸುತ್ತಾರಲ್ಲ ? ಹಾಗಲ್ಲ ಈ ಮನೆಯ ಮೇಲಿನ ರೇಡ್ ಗಳು.

Specific ಆದ ದೂರು ಮತ್ತು ನಿರ್ದಿಷ್ಟವಾಗಿ ಇಂತಹ ಅಕ್ರಮ ಸಂಪತ್ತು ಚಲಾವಣೆ / ಸಾಗಣೆ ಇತ್ಯಾದಿಗಳು ನಡೆಯುವ ಬಗ್ಗೆಯೂ ಮೊದಲೇ ತಿಳಿಸಿರುತ್ತಾರೆ. ಆ ಸಂಗತಿ ಸತ್ಯವೆಂದು ಮನವರಿಕೆಯಾದರೆ ಮಾತ್ರ ಜಡ್ಜ್ ವಾರಂಟ್ ಕೊಡಲು ಸಮ್ಮತಿಸುತ್ತಾರೆ. ತಾವು ಯಾಕೆ ಸರ್ಚ್ ವಾರಂಟ್ ನೀಡಿದೆ ಎಂಬುದರ ಶರಾವನ್ನೂ ಬರೆದುಕೊಳ್ಳುತ್ತಾರೆ

ವಸ್ತುಸ್ಥಿತಿ ಹೀಗಿದ್ದಾಗ, ಪ್ರಧಾನ ಮಂತ್ರ ಅಥವಾ ಷಾ ” ಹೋಗ್ರಿ ರೈಡ್ ಮಾಡಿಕೊಂಡು ಬನ್ರೀ ” ಅಂತ ಆಜ್ಞಾಪಿಸಿಬಿಟ್ಟರೆ ದಾಳಿ ಮಾಡಲಾಗುವುದಿಲ್ಲ.

ಅನೇಕರಿಗೆ ದಾಳಿ ಮಾಡುವುದು ಅಂದರೆ,ಬಾಗಿಲು ಮುರಿದು ಒಳನುಗ್ಗಿ ಚೆಲ್ಲಾಪಿಲ್ಲಿಯಾಗಿಸುವುದು ಎಂಬೆಲ್ಲಾ ಅಭಿಪ್ರಾಯಗಳಿವೆ ! ದಾಳಿ ನಡೆಸುವ ಮುನ್ನ, ಒಳಗಿರುವವರು ಹೊರಬಂದು ಓಡದಂತೆ ದಾಳಿಸಿಬ್ಬಂದಿ ಎಲ್ಲ ಹೊರಬಾಗಿಲುಗಳಿಗೂ ಕಾವಲಾಗಿ ನಿಲ್ಲುತ್ತಾರೆ. ಮನೆಯ ಯಜಮಾನನಿಗೆ ರೇಡ್ ಅಧಿಕಾರಿ ತನ್ನ ಗುರುತುಪತ್ರ ತೋರಿಸಿ , ದಾಳಿಯ ವಿಚಾರವನ್ನು ವಿವರಿಸಿ ತನಿಖೆಗೆ ಸಹಕರಿಸುವಂತೆ ಕೋರುತ್ತಾರೆ.

ಮನೆ ಯಜಮಾನನ ಸಮ್ಮುಖದಲ್ಲಿ ದಾಳಿತಂಡದವರನ್ನು ತಪಾಸಣೆಗೆ ಒಳಪಡಿಸಿ [ ಅವರು ಹೊರಗಿನಿಂದ ಯಾವ ವಸ್ತುವನ್ನೂ ತಮ್ಮ ಜೊತೆ ತಂದಿಲ್ಲವೆಂಬುದನ್ನು ಖಚಿತಪಡಿಸಿ ] ಮನೆಯ ಒಳಗಡೆ ಹೋಗುವಂತೆ ತಿಳಿಸುತ್ತಾರೆ. ಮನೆಯಲ್ಲಿರುವ ಹೆಂಗಸರು,ಮಕ್ಕಳಿಗೆ ಪ್ರತ್ಯೇಕವಾಗಿ ಒಂದೆಡೆ ಕ್ಷೇಮವಾಗಿ ಕೂರಿಸಿ,ಮಹಿಳಾ ಪೊಲೀಸರನ್ನು ಕಾವಲಿಗೆ ಹಾಕುತ್ತಾರೆ.ನಂತರ ಇಡೀ ಮನೆಯ ಶೋಧ ಶುರುವಾಗುತ್ತದೆ.ಇಂಚಿಂಚನ್ನೂ ಪರೀಕ್ಷಣೆಗೆ ಒಳಪಡಿಸುತ್ತಾರೆ.ಸ್ವಿಚ್ಚು,ಏಸಿ ಒಳಭಾಗ ಮೊದಲ್ಗೊಂಡು ಪ್ರತಿ ಸಂದೂಕ ಗೂಡುಗಳನ್ನೂ ಜಾಲಾಡುತ್ತಾರೆ.ಅಡಗಿಸಿರುವ ವಸ್ತುಗಳನ್ನು ಹುಡುಕುತ್ತಾರೆ.ಯಾರಿಗೂ ಯಾವ ರೀತಿಯಲ್ಲೂ ಮುಜಗರವಾಗದಂತೆ,ಅವಮಾನವಾಗದಂತೆ ಗೌರವದಿಂದಲೇ ನಡೆದುಕೊಳ್ಳುತ್ತಾರೆ.. ತನಿಖಾತಂಡ ಒಂದಿನಿತು ತಪ್ಪು ಮಾಡಿದರೂ,ರಾದ್ಧಾಂತ ಎಬ್ಬಿಸಲು ರೇಡ್ ಅಪರಾಧಿ ರಣಹದ್ದಿನಂತೆ ಅಲ್ಲೇ ಕಾದಿರುತ್ತಾನೆ.ಅವನ ಎಂಜಲಹಾಳೆಗಳೂ ಗಬ್ಬೆಬ್ಬಿಸಲು ಹೊಂಚುಹಾಕಿ ಹೊರಗೆ ಕಾಯುತ್ತಿರುತ್ತವೆ. ಇದಕ್ಕೆ ಅವಕಾಶ ಕೊಡದಂತೆ ಕಾರ್ಯಾಚರಣೆ ಮಾಡುವಲ್ಲಿ ತನಿಖಾತಂಡದ ಜಾಣ್ಮೆ ಅಡಗಿರುತ್ತೆ.