ಒಂದೇ ವಾರದಲ್ಲಿ ಮತ್ತೆ ಮರಳು ಪ್ರಾರಂಭ : ರಘುಪತಿ ಭಟ್ -Vishwanews24

Featured, ಉಡುಪಿ

ಉಡುಪಿ: ಇನ್ನೊಂದು ವಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳುಗಾರಿಕೆ ಪ್ರಾರಂಭಗೊಳ್ಳಲಿದೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಮರಳು ದಿಬ್ಬವನ್ನು ತೆರವುಗೊಳಿಸಲು ಕೆ.ಎಸ್.ಇ.ಝಡ್, ಸಿ.ಆರ್.ಝಡ್ ಸಮಿತಿಯಿಂದ ಬಾಕಿ ಇದ್ದ ನಿರ್ಣಯವನ್ನು ಪೂರ್ಣಗೊಳಿಸಿ ಕಾರ್ಯದರ್ಶಿಯವರು ನೀಡಿದ್ದಾರೆ. ಇನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಳು ಮಂದಿ ಸದಸ್ಯರ ಸಮಿತಿಯಲ್ಲಿ ಮಂಡಿಸಿ 171 ಜನ ಪರವಾನಗಿದಾರರಿಗೆ ಮರಳನ್ನು ನೀಡಿ ಮರಳು ವಿತರಣೆ ಆ್ಯಪ್ ಮೂಲಕ ಮಾಡಲು ಈ ನಿರ್ಣಯದಿಂದ ಅನುಕೂಲವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಕೈಗೊಂಡ ನಿರ್ಧಾರದಂತೆ ಮತ್ತೆ ಮರಳು ದಿಬ್ಬವನ್ನು ತೆರವುಗೊಳಿಸುವ ಸಂಬಂಧ ಸೂಚನೆ ನೀಡಲಾಗಿದೆ. ಹೀಗಾಗಿ ಒಂದು ವಾರದ ಒಳಗೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳು ಪ್ರಾರಂಭವಾಗಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಇವರು ತಿಳಿಸಿದ್ದಾರೆ.

ಜಿಲ್ಲೆಯ ಸ್ವರ್ಣ ನದಿಯಲ್ಲಿ ಗುರುತಿಸಿರುವ ಆರು ದಿಬ್ಬಗಳು, ಸೀತಾ ನದಿಯಲ್ಲಿ ಗುರುತಿಸಿರುವ ಮೂರು ಮರಳು ದಿಬ್ಬಗಳು ಹಾಗೂ ಪಾಪನಾಶಿನಿ ನದಿಯಲ್ಲಿ ಗುರುತಿಸಿರುವ ಒಂದು ದಿಬ್ಬ ಸೇರಿದಂತೆ ಉಡುಪಿ ತಾಲೂಕಿನ ಒಟ್ಟು 10 ದಿಬ್ಬಗಳಲ್ಲಿ ಲಭ್ಯವಿರುವ 7.13 ಲಕ್ಷ ಮೆಟ್ರಿಕ್ ಟನ್ ಮರಳುಗಳ ತೆರವಿಗೆ ಪ್ರಾಧಿಕಾರ ತನ್ನ ಅನುಮೋದನೆ ನೀಡಿದೆ.