ಒಮಾನ್‌ನಲ್ಲಿ ರಸ್ತೆ ಅಪಘಾತ : ಕಾಪು ಮೂಲದ ವ್ಯಕ್ತಿ ಸೇರಿ ಮೂವರು ಸಾವು – vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ಉಡುಪಿ

ಒಮಾನ್‌ನಲ್ಲಿ ರಸ್ತೆ ಅಪಘಾತ : ಕಾಪು ಮೂಲದ ವ್ಯಕ್ತಿ ಸೇರಿ ಮೂವರು ಸಾವು

ಮಸ್ಕತ್ :ಓಮನ್‌ನ ಉತ್ತರ ಅಲ್ ಬಟಿನಾ ಗವರ್ನರೇಟ್‌ನ ಲಿವಾದ ವಿಲಾಯತ್‌ನಲ್ಲಿ ಭಾನುವಾರ ನಡೆದ ಬಹು ವಾಹನ ಅಪಘಾತದಲ್ಲಿ ಉಡುಪಿಯ ಕಾಪು ಬಳಿಯ ಉಚ್ಚಿಲ ಕಳತ್ತೂರು ಚೇತನ್ (26) ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡ ಘಟನೆ ನಡೆದಿದೆ.

ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಪ್ರಕಾರ, ಅಪಘಾತವು ಮೂರು ವಾಹನಗಳ ನಡುವೆ ಮುಂಜಾನೆ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.

ಇದನ್ನೂ ಓದಿ :

ಕುಂದಾಪುರ : ಕಾರು ಪಲ್ಟಿ ; ಚಾಲಕ ಸೇರಿ ಆರು ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ – vishwanews24

ಅವಶೇಷಗಳಲ್ಲಿ ಸಿಲುಕಿರುವವರಿಗೆ ಸಹಾಯ ಮಾಡುವುದು ಸೇರಿದಂತೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ವೈದ್ಯಕೀಯ ತಂಡಗಳು ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿವೆ.

Leave a Reply