‘ಒಳ್ಳೆ ಹಿಂದೂಗಳು ಬೇರೆಯವರ ಪ್ರಾರ್ಥನಾ ಸ್ಥಳವನ್ನು ಧ್ವಂಸ ಮಾಡಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಬಯಸುವುದಿಲ್ಲ : ಶಶಿ ತರೂರ್

Featured, ರಾಷ್ಟ್ರ ನ್ಯೂಸ್

ನವದೆಹಲಿ: ಅಯೋಧ್ಯೆಯಲ್ಲಿ  ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ಸಂಸದ ಶಶಿ ತರೂರ್  ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ. ಬ್ರಾಬಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಹುತೇಕ ಹಿಂದೂಗಳು ಅಯೋಧ್ಯೆ ರಾಮನ ಜನ್ಮಸ್ಥಳ ಎಂದು ನಂಬಿದ್ದಾರೆ. ಆದ್ರೆ ಯಾವೊಬ್ಬ ಒಳ್ಳೆ ಹಿಂದೂ ಕೂಡ ಬೇರೆಯವರ ಪ್ರಾರ್ಥನಾ ಸ್ಥಳವನ್ನು ಧ್ವಂಸ ಮಾಡಿ ರಾಮ ಮಂದಿರ ನಿರ್ಮಿಸಲು ಬಯಸುವುದಿಲ್ಲ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಚೆನ್ನೈನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೋಮುವಾದವನ್ನ ಆಶ್ರಯಿಸಬಹುದು ಎಂದು ಹೇಳಿದರು,.

ಮುಂಬರುವ ಕೆಲವು ತಿಂಗಳಲ್ಲಿ ಮತ್ತಷ್ಟು ಅಹಿತಕರ ಘಟನೆಗಳಿಗೆ ನಾವು ತಯಾರಾಗಬೇಕು. ಯಾಕಂದ್ರೆ ಆಡಳಿತ ಪಕ್ಷ ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನ ಹೆಚ್ಚಿಸಬಹುದು. ಈ ಹಿಂದಿನ ಘಟನೆಗಳನ್ನ ನೋಡುವುದಾದರೆ ಚುನಾವಣೆ ಹಾಗೂ ಕೋಮು ಸಂಘರ್ಷಕ್ಕೆ ಪರಸ್ಪರ ಸಂಬಂಧ ವಿರೋದವನ್ನುಕಾಣಬಹುದು ಎಂದರು.